ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಅವರು ನಾಡಿನ ವಿವಿಧ ಪತ್ರಿಕೆಗಳಿಗೆ ಬರೆದ ಅಂಕಣ ಬರೆಹಗಳ ಸಂಗ್ರಹ -ಜೀವನ ಮಾರ್ಗ. ಸ್ವತಃ ವೈದ್ಯರಿದ್ದು, ಅವರಲ್ಲಿಗೆ ಬರುವ ಎಲ್ಲ ವರ್ಗದ ರೋಗಿಗಳೋಂದಿಗಿನ ಒಡನಾಟದ ಮೂಲಕ ಅವರು ಜೀವನದ ಬಹುತೇಕ ಆಯಾಮಗಳನ್ನು ಕಂಡು ಅವುಗಳನ್ನು ಬರೆಹಕ್ಕಿಳಿಸಿದ್ದಾರೆ. ಸಾಮಾಜಿಕ -ಆಚಾರ-ವಿಚಾರ, ಅನಿಷ್ಟತೆಗಳು, ಆರೋಗ್ಯ, ಮೂಢನಂಬಿಕೆ, ಸಹಾನುಭೂತಿ, ಅನುಕಂಪ ಎಲ್ಲವೂ ಬರೆಹಗಳ ಮೂಲ ಕೇಂದ್ರಗಳಾಗಿವೆ. ಇವರ ಬರೆಹದಲ್ಲಿ ಸಮಾಜ ಉನ್ನತಿಯ ಕಾಳಜಿ, ಕಾತರತೆ ಹಾಗೂ ಕಾರ್ಯ ತತ್ಪರತೆ ವ್ಯಕ್ತವಾಗುತ್ತದೆ.
ವೃತ್ತಿಯಲ್ಲಿ ವೈದ್ಯೆಯಾಗಿ, ವಿಶೇಷವಾಗಿ ಮಕ್ಕಳ ಹೃದಯತಜ್ಞೆಯಾಗಿ, ಬಡವರ ಬಗ್ಗೆ ಮಾನವೀಯತೆ, ಅನುಕಂಪದ ಗುಣಗಳನ್ನು ಹೊಂದಿರುವ, ಮನದಾಳದಲ್ಲಿ ಮೂಡುವ ಆರ್ದ್ರ ಭಾವಗಳಿಗೆ ಅಕ್ಷರ ರೂಪ ನೀಡುವ ಸಾಹಿತಿಯಾಗಿ ಓದುಗರ ಮನಸ್ಸನ್ನು ಸೆಳೆದಿರುವ ವಿಜಯಲಕ್ಷ್ಮಿ ಬಾಳೇಕುಂದ್ರಿಯವರು ಹುಟ್ಟಿದ್ದು 1950 ರ ಆಗಸ್ಟ್ 6ರಂದು ಬೆಳಗಾವಿಯಲ್ಲಿ. ತಂದೆ ಈಶ್ವರಪ್ಪ ಗುರುಸಿದ್ಧಪ್ಪ ಬಾಳೇಕುಂದ್ರಿ, ತಾಯಿ ಸಿದ್ದವ್ವ. ತಂದೆ ಮುಂಬಯಿ ವಿಶ್ವವಿದ್ಯಾಲಯದಿಂದ ಪಶುವೈದ್ಯಕೀಯದಲ್ಲಿ ಚಿನ್ನದ ಪದಕದೊಡನೆ ಪದವಿ ಪಡೆದಿದ್ದಲ್ಲದೆ ವೈಸ್‌ರಾಯ್‌ರವರಿಂದ ಪ್ರಶಸ್ತಿ ಪಡೆದ ಪ್ರತಿಭಾನ್ವಿತರು. ತಾಯಿಯ ತಂದೆ ರಾವಬಹದ್ದೂರ್ ವೈಜನಾಥ ಅನಗೋಳ್‌ರವರು ಬೆಳಗಾವಿಯ ಕೆ.ಎಲ್.ಇ. ಸೊಸೈಟಿಯ ಸಂಸ್ಥಾಪಕರಲ್ಲೊಬ್ಬರು, ಸುಶಿಕ್ಷಿತ, ಸುಸಂಸ್ಕೃತ ಮನೆತನ. ಪ್ರಾರಂಭಿಕ ಶಿಕ್ಷಣ ...
READ MORE