ಈತರ್‍ಕೆ-ಈತರ ಪತ್ರಕರ್ತ ಮಂಜುನಾಥ ಎಂ. ಅದ್ದೆಯವರ ಲೇಖನ ಸಂಕಲನ. ಸಾಮಾಜಿಕ ತುಡಿತ, ಬಡತನದ ಒಡಲಾಳದ ದನಿಯಾಗಿ ಸ್ಪಂದಿಸುವ ಚೇತನವಾಗಿ ಮಂಜುನಾಥ್ ಅದ್ದೆಯವರು ಯುವ ಸಮುದಾಯದೊಂದಿಗೆ ಗುರುತಿಸಿಕೊಂಡವರು. ಪತ್ರಕರ್ತರಾಗಿ ತಮ್ಮ ಲೇಖನಗಳ ಮೂಲಕ ಸಾಮಾಜಿಕ ಹೋರಾಟದಲ್ಲಿ ಭಾಗಿಯಾದವರು.
ಪತ್ರಿಕೆಗಾಗಿ ಅವರು ಬರೆದ ವಿಭಿನ್ನ ಮತ್ತು ವಿಶೇಷ ಲೇಖನಗಳ ಸಂಕಲನ ಈ ಕೃತಿ. ಜಾತಿ ಗೆರೆಗಳನ್ನು ದಾಟಿ ಯೋಚಿಸಬಲ್ಲ ಸಂವೇದನಾಶೀಲ ವ್ಯಕ್ತಿ ಮಾತ್ರ ಸಂವೇದನಾಶೀಲ ಕವಿ, ಲೇಖಕ, ನಾಯಕನೆನಿಸಿ ಕೊಳ್ಳಬಲ್ಲ. ಈ ಮೂರು ಗುಣಗಳು ಮಂಜುನಾಥ್ ಅದ್ದೆಯವರ ಕೃತಿಯಲ್ಲಿ, ನಡೆಯಲ್ಲಿ, ನುಡಿಯಲ್ಲಿ ಇರುವ ಕಾರಣ ಅವರ ಈ ಕೃತಿ ಒಂದು ರೀತಿ ಸಾರ್ವಜನಿಕರಿಗೆ ಆಪ್ಯತೆ ಒದಗಿಸಬಲ್ಲದು.
ಪತ್ರಿಕೋದ್ಯಮ, ಸಾಹಿತ್ಯ, ಹೋರಾಟ- ಈ ಮೂರೂ ದೋಣಿಗಳಲ್ಲಿ ಪಯಣಿಸುತ್ತಿರುವ ಮಂಜುನಾಥ ಅದ್ದೆ ಅವರದ್ದು ಪ್ರತಿಭಾವಂತ ವ್ಯಕ್ತಿತ್ವ. ಬೆಂಗಳೂರು ಉತ್ತರ ತಾಲ್ಲೂಕಿನ ಅದ್ದೆ ಗ್ರಾಮದವರಾದ ಮಂಜುನಾಥ್ ಮೂಲತಃ ಕೃಷಿಕ ಕುಟುಂಬಕ್ಕ ಸೇರಿದವರು. 1973ರ ನಡುಭಾಗದಲ್ಲಿ ಹುಟ್ಟಿದ ಮಂಜುನಾಥ್ ಅವರ ತಂದೆ ಮುನಿಹನುಮಯ್ಯ, ತಾಯಿ-ಲಕ್ಷ್ಮಮ್ಮ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದಲ್ಲಿ ಎಂ.ಎ.ಸ್ನಾತಕೋತ್ತರ ಪದವಿ ಪಡೆದ ನಂತರ ಬದುಕಿನ ಮಾರ್ಗದ ಬಗ್ಗೆ ಅವರಿಗೆ ಗೊಂದಲಗಳೇ ಇರಲಿಲ್ಲ. ದೊಡ್ಡಬಳ್ಳಾಪುರದ ಶ್ರೀಕೊಂಗಾಡಿಯಪ್ಪ ಕಾಲೇಜಿನಲ್ಲಿ ಎರಡು ವರ್ಷಗಳ ಕಾಲ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು. ಈ ಹೊತ್ತಿಗಾಗಲೇ ಸಮಾಜಮುಖಿ ಚಳವಳಿ, ಹೋರಾಟಗಳಲ್ಲಿ ತೊಡಗಿಕೊಂಡಿದ್ದ ಮಂಜುನಾಥ್ ಅದ್ದೆ ಹಲವು ಸಂಸ್ಥೆಗಳನ್ನು ಹುಟ್ಟುಹಾಕಿದ್ದರು. ತನ್ನೊಳಗಿನ ...
READ MORE