ಅಕ್ಷರ ಭಾರತಿ

Author : ಜೀಯು ಭಟ್ (ಗಜಾನನ ಉಮಾಮಹೇಶ್ವರ ಭಟ್)

Pages 219

₹ 220.00




Year of Publication: 2021
Published by: ನವಭಾರತಿ ಪ್ರಕಾಶನ
Address: ಮೈಸೂರು

Synopsys

‘ಅಕ್ಷರ ಭಾರತಿ’ ಜೀಯು ಭಟ್‌ ಅವರ ಕೃತಿಯಾಗಿದೆ. ಜನರಿಗೆ ಕಾಲಕಾಲಕ್ಕೆ ಯಾವುದೇ ಮಾಹಿತಿ, ಸುದ್ದಿಯನ್ನು ತಿಳಿಗೊಳಿಸಿ ತಿಳಿಸಿ; ಜನಜೀವನವನ್ನು ಸದಭಿರುಚಿಯ ಸ್ವಚ್ಛತೆಯ ಸಂಸ್ಕಾರದ ಹದಕ್ಕೆ ತರುವ ಶ್ರೀ ಭಟ್ಟರ ಬರೆಹಗಳು ಸಾವಯವ ತರಕಾರಿಯಂತೆ ಸ್ವಾದಿಷ್ಟವೂ ಸತ್ವಯುತವೂ ಆಗಿರುತ್ತವೆ. ಅವರ ಮಾಗಿದ ಮಾತು, ಬೆಲೆಯುಳ್ಳ ವಿಚಾರಪೂರ್ಣ ಬರೆಹಗಳು ಯಾವತ್ತೂ ಕನ್ನಡನಾಡಿನ ಸಂಪತ್ತಾಗಿರುತ್ತವೆ. ಓದಿದವರಿಗೆ ಒಂದು ಒಳನೋಟವನ್ನು, ಜೀವನದ ಮರ್ಮ ಮತ್ತು ಮಾಧುರ್ಯವನ್ನು ಸಹಜವಾಗಿ ಕಟ್ಟಿಕೊಡುವ ಬೆಳಕಿನ ಬುತ್ತಿಯಂತೆ ಇರುತ್ತವೆ.

About the Author

ಜೀಯು ಭಟ್ (ಗಜಾನನ ಉಮಾಮಹೇಶ್ವರ ಭಟ್)
(03 May 1948)

ಜೀಯು ಭಟ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. ಪತ್ರಿಕೋದ್ಯಮ ಮತ್ತು ಕೃಷಿಯನ್ನು ವೃತ್ತಿಯಾಗಿಸಿಕೊಂಡಿದ್ದಾರೆ. ಉದಯವಾಣಿ ಹಿರಿಯ ವರದಿಗಾರನಾಗಿ 50 ವರ್ಷಗಳಿಂದ ಕೆಲಸನಿರ್ವಹಿಸಿದ್ದಾರೆ . ಸಂಯುಕ್ತ ಕರ್ನಾಟಕ ಪತ್ರಿಕೆಯ ಹೊನ್ನಾವರದ ವರದಿಗಾರನಾಗಿ , ಗ್ರಾಮ ವಿಕಾಸ ವಾರಪತ್ರಿಕೆಯ ಸಂಪಾದಕನಾಗಿ, ಸಮನ್ವಯ ವಾರಪತ್ರಿಕೆಯ ಸ್ಥಾನಿಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದಾರೆ. “ಜೋಕುಮಾರ ಸ್ವಾಮಿ”, “ಅಂಧಯುಗ”, “ಬೇಲಿ ಮತ್ತು ಹೊಲ”, “ಆಷಾಢದ ಒಂದು ದಿನ”, ನಾಟಕಗಳನ್ನು ನಿರ್ದೇಶಿಸಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಾಗೂ ಹರಿಶ್ಚಂದ್ರ ಭಟ್ ನಿರ್ದೇಶಿಸಿದ “ಶೋಧ”,, ಕಾಶಿನಾಥರ “ಅನುಭವ”, ಅಂಬರೀಶ ಜೊತೆ “ಗಿರಿಬಾಲೆ”, ಚಲನಚಿತ್ರದಲ್ಲಿ, “ಅಪ್ಸರಧಾರಾ” ,ವಿಶಾಲರಾಜ್ ನಿರ್ದೇಶನದ ...

READ MORE

Related Books