"ಮನು ಭಾರತ “ವೆಂಬ ಕೃತಿಯು ಡಾ. ಎಂ.ಎಸ್ ಮಣಿ ಅವರ ಅಂಕಣ ಬರಹಗಳ ಸಂಕಲನ. ಆ೦ಕಣ ಬರಹಗಾರರಿಗೆ ಸಮಯದ ಡೆಡ್‌ಲೈನ್ ಇರುವಂತೆಯೇ ಸಮಕಾಲೀನ ವಿಷಯಗಳನ್ನು ಕುರಿತಾಗಿಯೇ ಬರೆಯುವ ಸಂದರ್ಭವೂ ಇರುತ್ತದೆ. ಅ೦ಕಣ ಬರಹಗಳು ವರದಿ ನಿರೂಪಣಾ ಶೈಲಿಯಿಂದ ಹೊರತಾಗಿರಬೇಕಾದರೆ ಅಧ್ಯಯನಶೀಲತೆ ಮತ್ತು ಚಿಂತನಶೀಲತೆ ಒಂದಾಗಿ ರೂಪುಗೊಳ್ಳಬೇಕಾಗುತ್ತದೆ.ಅಂಥ ಅಗತ್ಯವನ್ನು ಮೈಗೂಡಿಸಿಕೊಂಡು ಮೂಡಿರುವ ಬರಹಗಳು ಈ ಕೃತಿಯಲ್ಲಿವೆ.
ಡಾ.ಎಂ.ಎಸ್. ಮಣಿ ಅವರು ಪತ್ರಿಕಾ ರಂಗದಲ್ಲಿ ಉಪಸಂಪಾದಕ, ಸುದ್ದಿ ಸಂಪಾದಕರಾಗಿ , ಅಂಕಣಕಾರಾಗಿ 25 ವರ್ಷಗಳ ಅನುಭವ ಹೊಂದಿದ್ದಾರೆ. ಮಾಧ್ಯಮ ಅಕಾಡೆಮಿಯಂಥ ಅನೇಕ ಸಂಘ ಸಂಸ್ಥೆಗಳಲ್ಲಿ ಸದಸ್ಯತ್ವ ಪಡೆದುಕೊಂಡಿದ್ದು, ಪತ್ರಕರ್ತರ ಸಂಘಟನೆ, ಕಾರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ, ಸಂಸ್ಕೃತಿ, ಸಂಗೀತ ಕ್ಷೇತ್ರಗಳಲ್ಲಿಯೂ ಆಸಕ್ತಿ ಉಳ್ಳವರು. ಚಿಂತಕ ಸಾಧಕ ಹೆಚ್ ವಿಶ್ವನಾಥ್, ಕರುನಾಡಿನ ತ್ಯಾಗರಾಜರು, ತಲ್ಲಣ,ಹರಿವು, ಒಡಲಾಗ್ನಿ, ಭಾವಭಿತ್ತಿ, ಕಡಗೋಲು, ಮನುಭಾರತ, ಸುಡುಬಯಲು ಇವು ಮಣಿ ಅವರ ಕೃತಿಗಳು. ...
READ MORE