ಕಾಡುವ ಕವಿತೆ

Author : ನಾಗೇಶ್ ಜೆ. ನಾಯಕ

Pages 223

₹ 250.00




Year of Publication: 2023
Published by: ಸಹೃದಯ ಸಾಹಿತ್ಯ ಪ್ರತಿಷ್ಠಾನ (ರಿ) ಸವದತ್ತಿ
Address: ಸಹೃದಯ ಸಾಹಿತ್ಯ ಪ್ರತಿಷ್ಠಾನ (ರಿ) ಸವದತ್ತಿ, ‘ಅವ್ವ’ ಶಿವಬಸವ ನಗರ, ರಾಮಾಪೂರ ಸೈಟ್, ಸವದತ್ತಿ- 591126

Synopsys

`ಕಾಡುವ ಕವಿತೆ’ ನಾಗೇಶ್ ಜೆ. ನಾಯಕ ಅವರ ಅಂಕಣ ಬರಹವಾಗಿದೆ. ಇದಕ್ಕೆ ಕೆ. ಷರೀಫಾ ಅವರ ಬೆನ್ನುಡಿ ಬರಹವಿದೆ ಕೃತಿಯ ಕುರಿತು ಬರೆಯುತ್ತಾ 'ನಾಗೇಶ್ ಜೆ. ನಾಯಕ ಅವರ ಅಂಕಣ ಬರಹಗಳ "ಕಾಡುವ ಕವಿತೆ" ಕೃತಿಯಲ್ಲಿ ಸುಮಾರು 50 ಕವಿಗಳ ಕವಿತೆಗಳನ್ನು ವಿಶ್ಲೇಷಿಸಿದ್ದಾರೆ. ಕಾವ್ಯವೆಂದರೆ ಅದು ವಾಸ್ತವದ ಬದುಕಿನಿಂದ ಭಿನ್ನ ಅಲ್ಲ. ನಮ್ಮ ಕಾವ್ಯ ನಮ್ಮ ಸುಖ ದು:ಖದಲ್ಲಿ ಸಾಥ್ ನೀಡುತ್ತದೆ. ನಮ್ಮ ಮನದಾಳದ ತುಮುಲಗಳಿಗೆ, ಸಂಕಟಗಳಿಗೆ ಹೊರರೂಪವಾಗಿ ಕಾವ್ಯ ಸೃಜಿಸುತ್ತೇವೆ. ಇಲ್ಲಿ ನಾಯಕರು ತಾವು ಇಷ್ಟಪಡುವ ಹಿರಿ ಕಿರಿಯ ಕವಿಗಳ ಕಾವ್ಯವನ್ನು ವಸ್ತುನಿಷ್ಟವಾಗಿ ವಿಶ್ಲೇಷಿಸುತ್ತಾರೆ. ಇಲ್ಲಿಯ ಎಲ್ಲ ಕವಿಗಳ ಆತ್ಮವನ್ನು ಅವರ ಕಾವ್ಯದ ಮೂಲಕ ಮಾತ್ರ ಜಾಲಾಡದೇ ಅದನ್ನು ಅವರ ಲೋಕಾನುಭವದ ಆಧಾರದ ಮೇಲೆ ಅನುಸಂಧಾನ ನಡೆಸುವ ರೀತಿ ಮೆಚ್ಚುಗೆ ಪಡೆಯುತ್ತದೆ. ಕವಿಯ ಕಾವ್ಯದ ಅಂತರಂಗ ಬಹಿರಂಗವನ್ನು ಜಾಲಾಡುತ್ತಾ ವಾಸ್ತವದ ನೆಲೆಗೆ ಕವಿಯನ್ನೂ ಕವಿಯ ಕಾವ್ಯವನ್ನೂ ತಂದು ನಿಲ್ಲಿಸುವುದು ಇವರ ಕಾವ್ಯ ವಿಮರ್ಶೆಯ ಹೆಚ್ಚುಗಾರಿಕೆಯಾಗಿದೆ. ಹಿರಿಯ ಕವಿಗಳಾದ ಸತೀಶ್ ಕುಲಕರ್ಣಿ, ಲಲಿತಾನಾಯಕ್, ಸತ್ಯಾನಂದ ಪಾತ್ರೋಟ, ಬೆಸಗರಹಳ್ಳಿ ರಾಮಣ್ಣ, ಎಸ್. ಜಿ. ಸಿದ್ಧರಾಮಯ್ಯ, ಪೀರ್‌ಬಾಷಾ, ನನ್ನ ಹಾಗೂ ಬಸು ಬೇವಿನಗಿಡದ ಹಾಗೂ ಆರೀಫ್‌ರಾಜಾ ಇವರ ಕವಿತೆಗಳನ್ನು ವಸ್ತುನಿಷ್ಟವಾಗಿ ವಿಮರ್ಶಿಸಿರುವ ಇವರ ಪ್ರತಿಭೆ ಅಸಾಧಾರಣವಾದುದು ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು' ಎಂದಿದ್ದಾರೆ. 

About the Author

ನಾಗೇಶ್ ಜೆ. ನಾಯಕ
(23 February 1975)

ನಾಗೇಶ್ ಜೆ. ನಾಯಕ ವೃತ್ತಿಯಲ್ಲಿ ಶಿಕ್ಷಕರು. 1975 ಫೆಬ್ರವರಿ 23 ರಂದು ಸವದತ್ತಿಯಲ್ಲಿ ಜನಿಸಿದರು. ಕನ್ನಡ ದಿನಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನೀನೊಂದು ಮುಗಿಯದ ಸಂಭ್ರಮ, ಪ್ರೀತಿಯಿಂದ ಪ್ರೀತಿಗೆ, ಭರವಸೆಗಳ ಬೆನ್ನೇರಿ, ಪುಟ್ಟ ಪದ್ಯಗಳು, ಕವಿ ಸಮಯ  ಮಠದೊಳಗಣ ಬೆಕ್ಕು’ ಮುಂತಾದ ಕೃತಿಗಳು ಪ್ರಕಟಣೆಗೊಂಡಿವೆ. ಬಯಲ ಕನ್ನಡಿ-ವಿಮರ್ಶಾ ಸಂಕಲನ, ಒಡಲ ದನಿ-ಅಂಕಣ ಬರಹಗಳು, ಘನದ ಕುರುಹು-ವ್ಯಕ್ತಿ ಚಿತ್ರಣ, ಚಿನ್ನದ ಚೂರಿ-ಕಥಾ ಸಂಕಲನ ಅವರ ಇತ್ತಿಚಿನ ಕೃತಿಗಳಾಗಿವೆ. ಇವರ ಸಾಹಿತ್ಯ ರಚನೆಗಾಗಿ ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಸಂಚಯ ಕಾವ್ಯ ಪುರಸ್ಕಾರ, ಆಜೂರು ಪುಸ್ತಕ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ...

READ MORE

Related Books