ವಿಜಯವಾಣಿ ದಿನಪತ್ರಿಕೆಯ ಲಲಿತ ಪುರವಣಿಯಲ್ಲಿ ಪ್ರಕಟವಾದ ತಮ್ಮ ಆಪ್ತ ಸಮಾಲೋಚನೆಯ ಅಂಕಣದ ತಮ್ಮ ಆಯ್ದ ಬರಹಗಳನ್ನು ಲೇಖಕಿ ಶಾಂತಾ ನಾಗರಾಜ್ ಅವರು ಸಂಕಲಿಸಿದ ಕೃತಿ- ಇದು ನಿಮ್ಮ ಕಥೆ ಎಲ್ಲರ ಕಥೆ. ಯುವ, ಸಂಸಾರ ಹೀಗೇ ವರ್ಗೀಕರಿಸಿ, ಬದುಕಿನ ವಿವಿಧ ವರ್ಗದ ಜನರ ಬದುಕಿನ ಸಮಸ್ಯೆಗಳಿಗೆ ಲೇಖಕಿಯು ಈ ಪುಸ್ತಕದಲ್ಲಿ ಪರಿಹಾರ ನೀಡಿದ್ದಾರೆ. ಬದುಕಿನಲ್ಲಿ ಸಮಸ್ಯೆ ಇದೆ, ಆದರೆ, ಅದಕ್ಕೆ ಪರಿಹಾರ ಹೇಳುವವರು ಯಾರೂ ಇಲ್ಲ ಎಂದು ಕೊರಗುವುದು ಬೇಡ. ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ ಎಂಬ ಭರವಸೆಯ ಬರಹಗಳು ಇಲ್ಲಿವೆ.
ಹಿರಿಯ ಲೇಖಕಿ ಶಾಂತಾ ನಾಗರಾಜ್ ಅವರು ಎಂ..ಎ. (ಕನ್ನಡ) ಪದವೀಧರರು. ತಂದೆ ಎಸ್.ವಿ. ಹರಿದಾಸ್, ತಾಯಿ ಸೀತಾಬಾಯಿ. ವೃತ್ತಿಯಲ್ಲಿ ಉಪನ್ಯಾಸಕರು. ಆಪ್ತ ಸಲಹೆಗಾರರೂ ಆಗಿದ್ದಾರೆ. ಕೃತಿಗಳು: ನೀವು ಯಶಸ್ವಿ ಗೃಹಿಣಿಯೆ?, ಶಾಲಾ ಮಕ್ಕಳ ಪೋಷಕರಿಗೆ ಕಿವಿಮಾತು (2017), ದುಗುಡ ಕಳೆಯುವ ಮಾರ್ಗ(2009) ವ್ಯಕ್ತಿವಿಕಸನ ಮಾಲೆಯ ಕೃತಿಗಳು.. ಕಿತ್ತು ತಿನ್ನುವ ಮುಪ್ಪು (1989) ಕಾದಂಬರಿ, ಬಾಲಾಪರಾಧಿಗಳು (1984), ಸ್ವಉದ್ಯೋಗ ತೆರೆದ ಹೆಬ್ಬಾಗಿಲು ಕವನ ಸಂಕಲನ ಪ್ರಕಟಿಸಿದ್ದಾರೆ. ಡಾಲರ್ ಹಕ್ಕಿ (2002) ಪ್ರವಾಸ ಕಥನ ಮತ್ತು ಯಾನ ಸಂಸ್ಕತಿ ಇವರ ಕಥಾಸಂಕಲನ. ಪಟ್ಟದಗೊಂಬೆಯೂ ಪರದೇಶವೂ (2009)ರಲ್ಲಿ, ಭಾಷಾಂತರ (ಇತರರೊಂದಿಗೆ): ಅಭಿವೃದ್ಧಿ ಆಳಿಕೆ ಮತ್ತು ಮಾನವೀಯ ಮೌಲ್ಯಗಳು, ರೆಕ್ಕೆಯ ...
READ MORE