`ಅರ್ಥನಾರೀಶ್ವರ’ ವಿಶ್ವೇಶ್ವರ ಭಟ್ ಅವರ ಕೃತಿಯಾಗಿದೆ. ಕೃತಿಯ ಕುರಿತು ಬರೆದಿರುವ ವಿಶ್ವೇಶ್ವರ ಭಟ್ ಅವರು 'ಪ್ರತಿ ನಿತ್ಯದಂತೆ, ಸುಮಾರು ಎರಡು ತಿಂಗಳಿಗೆ ಆಗುವಷ್ಟು ಸಂಗ್ರಹ ಮಾಡಿಕೊಂಡು, ಹೆಚ್ಚೆಂದರೆ ಆರು ತಿಂಗಳು ಬರೆಯಬಹುದು ಎಂದು ಆರಂಭಿಸಿದ 'ವಕ್ರತುಂಡೋಕ್ತಿ' ಅಂಕಣ, ಇಪ್ಪತ್ತೈದು ವರ್ಷ ದಾಟಬಹುದು ಎಂದು ನಾನು ನಿರೀಕ್ಷಿಸಿರಲಿಲ್ಲ. ಈ ಮಧ್ಯೆ, ಕೆಲಕಾಲ ನಾನು ಪತ್ರಿಕೆಗಳನ್ನು ಬಿಟ್ಟರೂ 'ವಕ್ರತುಂಡೋಕ್ತಿ'ಯನ್ನು ಮಾತ್ರ ಬಿಟ್ಟಿಲ್ಲ. ಕೋಳಿ ದಿನವೂ ಒಂದು ಮೊಟ್ಟೆ ಹಾಕಲು ಮರೆಯಬಹುದು. ಆದರೆ ನಾನು ಜಗತ್ತಿನ ಯಾವ ಭಾಗದಲ್ಲಿಯೇ ಇರಲಿ, ಪ್ರತಿನಿತ್ಯ ಒಂದು 'ವಕ್ರತುಂಡೋಕ್ತಿ'ಯನ್ನು ಹೆತ್ತೇ ಹೆರುತ್ತೇನೆ. ಅದು ನನ್ನೊಂದಿಗೆ ಹೆಜ್ಜೆ ಹಾಕುತ್ತಲೇ ನಡೆದು ಬಂದಿದೆ. ನಾನು ಯಾವ ಪತ್ರಿಕೆಗೆ ಹೋದರೂ 'ವಕ್ರತುಂಡೋಕ್ತಿ'ಯನ್ನು ಕರೆದುಕೊಂಡು ಹೋಗುತ್ತಿದ್ದೇನೆ. ಆರಂಭದಲ್ಲಿ ಒಳಪುಟಗಳಿಗೆ ಸೀಮಿತವಾಗಿದ್ದ 'ವಕ್ರತುಂಡೋಕ್ತಿ', ಕ್ರಮೇಣ ಮುಖಪುಟಕ್ಕೆ ಬಡ್ತಿ ಪಡೆದಿದೆ. ವಿಶೇಷ ಮುಖಪುಟವಿದ್ದಾಗ, ಒಮ್ಮೊಮ್ಮೆ 'ವಕ್ರತುಂಡೋಕ್ತಿ'ಯನ್ನು ಕೈಬಿಟ್ಟಾಗ, 'ನೀವು ಸಂಪಾದಕೀಯ'ವನ್ನು ಬರೆಯದಿದ್ದರೂ ನಾವು ಕೇಳುವುದಿಲ್ಲ. ಆದರೆ ಯಾವ ಕಾರಣಕ್ಕೂ ವಕ್ರತುಂಡೋಕ್ತಿಯನ್ನು ಕೈಬಿಡಬೇಡಿ' ಎಂದು ಓದುಗರು ಹೇಳಿದ್ದುಂಟು. 'ವಕ್ರತುಂಡೋಕ್ತಿ'ಯಲ್ಲಿ ನಾನು ಮಹಿಳೆಯರ ಅವಹೇಳನ ಮಾಡಿದ್ದೇನೆಂದು ನನ್ನನ್ನು ಕೋರ್ಟಿಗೆ ಎಳೆದವರೂ ಉಂಟು. ಇನ್ನು ಆಗಾಗ ಟ್ರೋಲ್ ಆಗುವುದು ನನಗೆ ಒಗ್ಗಿ ಹೋಗಿದೆ. ಇದು ಈಟುದ್ದ 'ಸಣ್ಣಮೆಣಸಿನಕಾಯಿ'ಯ ಮಹಾತ್ಮ! ಎಂದಿದ್ದಾರೆ.
ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ, “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...
READ MORE