ನಟ ಪ್ರಕಾಶ್ ರೈ ಅವರು ’ಉದಯವಾಣಿ’ ಮತ್ತು ’ಪ್ರಜಾವಾಣಿ’ ಪತ್ರಿಕೆಗಳಿಗೆ ಬರೆದ ಅಂಕಣ ಬರಹಗಳ ಸಂಕಲನ ’ಅವರವರ ಭಾವಕ್ಕೆ’.
ಕೃತಿಯ ಕುರಿತು ರೈ ಅವರು ಮುನ್ನಡಿಯಲ್ಲಿ ’ಕೇರಳದಲ್ಲಿ, ದೆಹಲಿಯ ವಿಮಾನ ನಿಲ್ದಾಣದಲ್ಲಿ, ಹೈದರಾಬಾದಿನ ನನ್ನ ತೋಟದಲ್ಲಿ, ಬೆಂಗಳೂರಿನ ಆಫೀಸಿನಲ್ಲಿ, ಚೆನ್ನೈನ ಶೂಟಿಂಗ್ ತಾಣದಲ್ಲಿ- ಹೀಗೆ ಎಲ್ಲೆಂದರಲ್ಲಿ ಮಳೆ ಬಿದ್ದೊಡನೆ ನೆಲದಿಂದ ಮೊಳಕೆ ಒಡೆಯುವ ನೀಲಿ ಹೂವುಗಳ ಹಾಗೆ ಅರಳಿದ ಬರಹಗಳೆಲ್ಲಾ’ ಇಲ್ಲಿ ಒಟ್ಟಾಗಿವೆ ಎಂದಿದ್ದಾರೆ. ಬರೆಯುವುದು ಎಂದರೆ ಶಿಸ್ತುಬದ್ಧನಾಗುವುದು ಎನ್ನುವ ರೈ, ಲೇಖನಗಳನ್ನು ತಮ್ಮ ಬೊಗಸೆಗೆ ಬಿದ್ದ ಮಳೆ ಎಂದು ವರ್ಣಿಸುತ್ತಾರೆ.
ಪಯಣಗಳು ತರುವ ಪಕ್ವತೆ, ಎಲ್ಲರೂ ಸೇರಿ ಕಲೆಯ ತೇರೆಳೆಯೋಣವೇ?, ಸ್ತ್ರೀ ಎಂದರೆ ಅಷ್ಟೇ ಸಾಕೆ ಇತ್ಯಾದಿ ಪ್ರಮುಖ ಲೇಖನಗಳು ಕೃತಿಯಲ್ಲಿವೆ.
ಅಂತರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿರುವ ಕಲಾವಿದ ಪ್ರಕಾಶ್ ರೈ. ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಪ್ರಕಾಶ್ ಅಷ್ಟೇ ಸಂವೇದನಾ ಶೀಲ ವ್ಯಕ್ತಿಕೂಡಾ ಹೌದು. ನಿರ್ಮಾಪಕ, ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ಪ್ರಕಾಶ್ ಒಬ್ಬ ಒಳ್ಳೆಯ ಓದುಗ. ಜೊತೆಗೆ ಅಂಕಣಕಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಕನ್ನಡ ನಾಡಿನ ಪ್ರಕಾಶ್ ರೈ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪ್ರತಿಭಾನ್ವಿತ ಕಲಾವಿದರಾಗಿರುವ ಪ್ರಕಾಶ್ ಸಮಾಜಸೇವೆ, ಕೃಷಿ, ಸಂಸ್ಕೃತಿ ಚಿಂತನೆಯಲ್ಲಿಯೂ ಪ್ರಬುದ್ಧರಾಗಿ ತೊಡಗಿಸಿಕೊಂಡಿದ್ದಾರೆ. ಹಲವು ಹಳ್ಳಿಗಳನ್ನು ದತ್ತು ಪಡೆದು ಸಲಹುತ್ತಿರುವ ಅವರು, ಸೇವ್ ಟೈಗರ್ ಅಭಿಯಾನದ ರಾಯಭಾರಿಯಾಗಿಯೂ ಆಗಿದ್ದಾರೆ. ಸಮಾಜಶಾಸ್ತ್ರದ ಬಗ್ಗೆ ಆಸಕ್ತಿ ...
READ MORE