ಖ್ಯಾತ ಅಂಕಣಕಾರ ಡಾ. ಗುರುರಾಜ ಕರಜಗಿ ಅವರ ಅಂಕಣ ಬರೆಹಗಳ ಭಾಗ-13ರ ಕೃತಿ -ಕರುಣಾಳು ಬಾ ಬೆಳಕೆ’. ವಿವಿಧ ಮೂಲದ ನೀತಿ ಕಥೆಗಳನ್ನು ಆಯ್ದುಕೊಳ್ಳುವ ಮೂಲಕ ಜೀವನ ಸಂದೇಶ ನೀಡುವ ಇವರ ಅಂಕಣ ಬರೆಹಗಳು ತುಂಬಾ ಪರಿಣಾಮಕಾರಿಯಾಗಿದ್ದು. ಓದುಗರ ಗಮನ ಸೆಳೆಯುತ್ತವೆ.
ಡಾ.ಗುರುರಾಜ ಕರ್ಜಗಿಯವರು, ಗುರುರಾಜರು ಜನಿಸಿದ್ದು ೨೪.೦೫.೧೯೫೨ ರಲ್ಲಿ. ಶಿಕ್ಷಣ ತಜ್ಞರು. ಮೂರೂ ದಶಕಗಲಿಗಿಂತಲೂ ಹೆಚ್ಚುಕಾಲ ಉನ್ನತ ಮಟ್ಟದ ವಿದ್ಯಾಸಂಸ್ಥೆ ಕಟ್ಟಿ, ಬೆಳೆಸಿ, ಪ್ರಾಧ್ಯಾಪಕರಾಗಿ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ಜಲವಾಗಿಸಿದವರು. ವಿಶ್ವದಾದ್ಯಂತ ಶಿಷ್ಯ ಪರಂಪರೆಯನ್ನ್ನು ಹೊಂದಿರುವ ಇವರು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟನ್ನು ಪಡೆದುಕೊಂಡಿದ್ದಾರೆ. ೨೨ಕ್ಕೂಹೆಚ್ಚು ಸಂಶೋಧನಾ ಲೇಖನಗಳನು ದೇಶ ವಿದೇಶಗಳ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಸೃಜನ ಶೀಲತೆ,ಸಂವಹನಕಲೆ, ಮುಂತಾದದುಗಳಲಿ ಆಸಕ್ತಿ ಹೊಂದಿರುವ ಡಾ.ಕರಜಗಿಯವರು ತಮ್ಮ ಧನಾತ್ಮಕ ಚಿಂತನೆಗಳು, ಕಾರ್ಯಕ್ಷಮತೆ ಹಾಗೂ ಮಾನವೀಯ ಮೌಲ್ಯಗಳಿಗಾಗಿ ಚಿರಪರಿಚಿತರು ಇವರ ಉಪನ್ಯಾಸ ಹಾಗು ಕಾರ್ಯಾಗಾರಗಳಿಗೆ, ಭಾರತ ಮತ್ತು ವಿದೇಶಗಳಲ್ಲೂ ಹೆಚ್ಛು ಪರಿಚಿತರು. ಎಪ್ಪತ್ತಕ್ಕೂ ಹೆಚ್ಚು ...
READ MORE