ಲೇಖಕ, ಪತ್ರಕರ್ತ ವಿಶ್ವೇಶ್ವರ ಭಟ್ ಅವರ ’ ನೂರೆಂಟು ಮಾತು’ ಕೃತಿಯು ಅಂಕಣ ಬರಹಗಳ ಸಂಕಲನವಾಗಿದೆ. ಅವರ ವಿಶಿಷ್ಟ ಚಿಂತನೆ, ಹದವಾದ ಭಾಷಾಶೈಲಿ, ಸಕಾರಾತ್ಮಕ ನಿಲುವು ಮುಪ್ಪುರಿಗೊಂಡು ಇಲ್ಲಿನ ಎಲ್ಲಾ ಬರಹಗಳು ಜೀವನಕ್ಕೆ ಹತ್ತಿರವೆನಿಸುತ್ತವೆ. ಈ ಬರಹಗಳಲ್ಲಿ ಎಲ್ಲೂ ಉಪದೇಶವಿಲ್ಲ, ಭಾಷೆಯ ಆಡಂಬರಗಳಿಲ್ಲ, ಯಾರಿಗೂ ಆದೇಶ ಕೊಡುವುದಿಲ್ಲ, ಸ್ವಂತ ಪರಾಕ್ರಮಗಳ ಭರಾಟೆ ಇಲ್ಲ. ‘ನೂರೆಂಟು ಮಾತು’ ನೂರೆಂಟು ರೀತಿಯಲ್ಲಿ ಭಿನ್ನವಾಗಿದೆ.
ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ, “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...
READ MORE