‘ಶಿಶಿರ ಕಾಲ’ ಶಿಶಿರ್ ಹೆಗಡೆ ಅಂಕಣ ಬರಹವಾಗಿದೆ. ಪ್ರತೀ ವಾರ ಬರೆಯುವುದು, ಅದಕ್ಕೆ ಬೇಕಾದ ತಯಾರಿಗಳು ಇವೆಲ್ಲ ನನ್ನಿಂದ ಇಷ್ಟು ನಿರಂತರ ನಡೆಯುತ್ತದೆಯೆಂದು ಎಂದೂ ಅಂದುಕೊಂಡಿರಲಿಲ್ಲ. ಈಗ ಮೂರು ವರ್ಷಕ್ಕಿಂತ ಜಾಸ್ತಿಯೇ ಆಯಿತು. ವಾರಕ್ಕೊಮ್ಮೆ ಬರೆಯಲು ಕೂರುವುದು ಅಭ್ಯಾಸವಾಗಿದೆ. ಶಿಶಿರಕಾಲ ಅಂಕಣ ಆರಂಭವಾದಾಗಿನಿಂದ ಒಂದು ವಾರವೂ ತಪ್ಪಿಸಿದ್ದಿಲ್ಲ. ಆನಾರೋಗ್ಯ, ವೈಯಕ್ತಿಕ ಕಾರಣಗಳು, ವೃತ್ತಿ, ಓಡಾಟ, ಕೌಟುಂಬಿಕ ಅವಶ್ಯಕತೆಗಳು ಅದೆಷ್ಟೋ ಬಾರಿ ಬರೆಯುವ ಒತ್ತಡವನ್ನು ಹೆಚ್ಚಿಸಿದ್ದಿದೆ. ಆದರೆ ಪ್ರತೀ ವಾರ ಓದುಗರ ನಿರೀಕ್ಷೆ ಅದೆಲ್ಲವನ್ನು ಮೀರುವುದಕ್ಕೆ ಶಕ್ತಿಯಾಗಿದೆ. ಇದೆಲ್ಲದರಿಂದ ನನ್ನಲ್ಲಿ ಒಂದಿಷ್ಟು ಓದಿನ ಶಿಸ್ತು ಬಂದಿದೆ. ಓದು ಅನಿವಾರ್ಯತೆಯಾದ ಬಗ್ಗೆ ನನಗೆ ಖುಷಿಯಿದೆ. ಜೊತೆಗೆ ಬರವಣಿಗೆ ನನಗೊಂದು ಗುರುತನ್ನು ತಂದು ಕೊಟ್ಟಿದೆ. ನನಗೆ ಅದೆಲ್ಲದರ ಬಗ್ಗೆ ಸಾರ್ಥಕ್ಯವಿದೆ.
ಶಿಶಿರ್ ಹೆಗಡೆ ಅವರು ಕರಾವಳಿಯ ಕುಮಟಾ ತಾಲ್ಲೂಕಿನ ಮೂರೂರಿನವರು. ಯಕ್ಷಗಾನ ಕುಟುಂಬದ ಹಿನ್ನೆಲೆಯುಳ್ಳವರು. ಕುಮಟಾ ಮತ್ತು ಹುಬ್ಬಳ್ಳಿಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು ಓದಿದ್ದು ಇಂಜಿನಿಯರಿಂಗ್. ಶಾಸ್ತ್ರೀಯವಾಗಿ ಯಕ್ಷಗಾನವನ್ನು ಕಲಿತು ಕೆಲವು ಪ್ರದರ್ಶನವನ್ನು ನೀಡಿದ್ದಾರೆ. ವೃತ್ತಿಯಲ್ಲಿ ಅಮೆರಿಕಾದ MNC ಯಲ್ಲಿ ಅಸೋಸಿಯೆಯೇಟ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತಿದ್ದಾರೆ. ವಿಶ್ವವಾಣಿಯಲ್ಲಿ ಅಂಕಣಕಾರರಾಗಿ ಸಕ್ರಿಯರಾಗಿದ್ದು. ಓದು, ಬರವಣಿಗೆ, ಫೋಟೋಗ್ರಾಫಿ, ಪ್ರವಾಸ, ಕ್ರಿಕೆಟ್, ವಾಲಿಬಾಲ್ ಅವರ ಹವ್ಯಾಸವಾಗಿದೆ. ಕೃತಿ: ಶಿಶಿರ ಕಾಲ ...
READ MORE