‘ದಶದಿಕ್ಕು’ ಕಿಶೋರ ಸಾಹಿತಿ ಅಂತಃಕರಣನ ಅಂಕಣ ಬರಹಗಳ ಸಂಕಲನ. ಇಲ್ಲಿನ ಅಂಕಣಗಳಲ್ಲಿ ವೈವಧ್ಯತೆ ಇದೆ. ಶಾಲೆ, ಓದು, ಸಾಹಿತ್ಯ, ಆಟ, ಸಿನಿಮಾ, ತಂತ್ರಜ್ಞಾನ, ಪರಿಸರ, ಪ್ರವಾಹ ಮತ್ತು ಚರ್ಚೆಯ ವಿಭಾಗಗಳು ಇಲ್ಲಿವೆ.
ಇವನ್ನು ವರ್ಗೀಕರಿಸಿರುವುದು ಅಧ್ಯಯನದ ದೃಷ್ಟಿಯಿಂದ ಮಾತ್ರವಲ್ಲ, ಅಂಕಣಕಾರನ ಅಭಿರುಚಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೂ ಸಹಾಯಕವಾದ ಅಂಶ. ದಶದಿಕ್ಕು ಎಂಬ ಶೀರ್ಷಿಕೆಯೂ ಈ ಅಂಶವನ್ನು ಧ್ವನಿಸುತ್ತದೆ;
ಅವನ ಅಂಕಣಗಳು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವುದರಿಂದ ಪತ್ರಕರ್ತನಲ್ಲಿ ಇರಬೇಕಾದ ಸಮಯಪ್ರಜ್ಞೆಯೂ, ಸೃಜನಶೀಲ ಲೇಖಕನೂ ಆಗಿರುವುದರಿಂದ ಸಾಂಸ್ಕೃತಿಕ ಜಾಗೃತಿಯು ಇಲ್ಲಿನ ಬರಹಗಳಲ್ಲಿ ಪಡಿಮೂಡಿವೆ. ಹನ್ನೆರಡು ವರ್ಷದ ಬಾಲಕನ ವಯಸ್ಸಿಗೆ ಅನುಗುಣವಾದ ಚಿಂತನೆಗಳು ಇಲ್ಲಿನ ಎಲ್ಲ ಅಂಕಣ ಬರಹಗಳಲ್ಲಿ ಪ್ರಾಮಾಣಿಕವಾಗಿ ದಾಖಲಾಗಿವೆ. ಸಾಮಾಜಿಕ ಬದ್ಧತೆ ಮತ್ತು ಸಾಂಸ್ತಿಕ ಹೊಣೆಗಾರಿಕೆಯ ಅಂಶಗಳಿಲ್ಲ ಅಂತರ್ಗತವಾಗಿರುವುದಕ್ಕೆ ಈ ದಶದಿಕ್ಕು ಅಂಕಣ ಬರಹಗಳ ಸಂಕಲನದಲ್ಲಿ ವಿಫುಲವಾದ ಪುರಾವೆಗಳು ಸಿಗುತ್ತವೆ.
ಅಂತಃಕರಣ ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...
READ MORE