ಟೀಕೆ ಟಿಪ್ಪಣಿ ಸಂಪುಟ-1 ಕನ್ನಡದ ಸೃಜನಶೀಲ ಬರಹಗಾರ, ಪತ್ರಕರ್ತ ಪಿ. ಲಂಕೇಶ್ ಅವರ ಅಂಕಣ ಬರಹಗಳ ಸಂಗ್ರಹ. ‘ಅಂಕಣ ಬರೆಯುವವ ಅಮರತ್ವದ ಜೊತೆಗೆ ಹುಡುಗಾಟ ಆಡುವವ. ಆತ ತನ್ನ ಸುತ್ತಣ ಬದುಕನ್ನು ಕಂಡು ಹುಮಸ್ಸುಗೊಂಡು ಬರೆಯುತ್ತಾನೆ. ಈ ಹುಮ್ಮಸ್ಸುನ್ನ ಸ್ಪೂರ್ತಿ ಅನ್ನುವುದಕ್ಕೆ ಕೂಡ ಹಿಂಜರಿಯುತ್ತಾನೆ. ಬುದ್ದಿಜೀವಿಯಂತೆ ಸಂಕೀರ್ಣವಾಗಿ ಬರೆಯುವುದಾಗಲಿ. ಕವಿಯಂತೆ ಭವಿಷ್ಯದ ಜನಾಂಗಕ್ಕೆ ಬರೆಯುವುದಾಗಲಿ ಅಂಕಣಕಾರನಿಗೆ ಸಾಧ್ಯವಾಗುವುದಿಲ್ಲ’ ಎನ್ನುತ್ತಾರೆ ಪಿ. ಲಂಕೇಶ್. ಇವತ್ತಿನ ಭಾಷೆಯಲ್ಲಿ ಬರೆದು ಓದುಗರ ಆಸಕ್ತಿ ಕೆರಳಿಸದಿದ್ದರೆ ಎಲ್ಲಾ ವ್ಯರ್ಥವಾಗುತ್ತದೆ. ಅಂಕಣದ ಆರಂಭದಲ್ಲಿ ಅನ್ವೇಷಣೆಯಾದದ್ದು ಕ್ರಮೇಣ ಅಂಕಣಕಾರನ ಶೈಲಿಯಾದಾಗಲೂ ಜೀವಂತಿಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಈ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದವನು ಉತ್ತಮ ಕತೆ, ಕಾದಂಬರಿಕಾರರಷ್ಟೇ ಅರ್ಥಪೂರ್ಣವಾಗುತ್ತಾನೆ. ಅಂಕಣದ ಬಗೆಗಿನ ನನ್ನ ವಿಶ್ವಾಸವನ್ನು ದೃಢಗೊಳಿಸಿದ್ದು ಈ ಕೃತಿ ಟೀಕೆ ಟೆಪ್ಪಣಿ ಎಂಬುದು ಲಂಕೇಶರ ಅಭಿಪ್ರಾಯ. ಈ ಕೃತಿಯ ಬಗ್ಗೆ ಬರೆಯುತ್ತಾ ಇದು ಪ್ರಕಟವಾಗುವುದಕ್ಕೆ ಸುಮಾರು ಹತ್ತು ವರ್ಷದ ಹಿಂದೆ ಬರೆದಿದ್ದ ಲೇಖನಗಳು ಜನರ ಆಸಕ್ತಿ ಕಾಪಾಡಿಕೊಳ್ಳುತ್ತಾ ಹೋದವು ಎನ್ನುತ್ತಾರೆ ಲಂಕೇಶ್. ಲಂಕೇಶ್ ಇವರ ಅಂಕಣ ಬರಹಗಳ ಸಂಕಲನ.
©2024 Book Brahma Private Limited.