ಹಿರಿಯ ಪತ್ರಕರ್ತ, ಹೋರಾಟಗಾರಾದ ದಿನೇಶ್ ಅಮೀನ್ ಮಟ್ಟು ರವರು ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವೇ ಈ “ದೆಹಲಿ ನೋಟ” ಕೃತಿ. ಸೈದ್ಧಾಂತಿಕ ಪೂರ್ವ ಪಕ್ಷಪಾತ ದೃಷ್ಟಿಯಿಂದ ಅಥವಾ ಪಕ್ಷದ ಪ್ರಣಾಳಿಕೆಗೆ ಬದ್ಧವಾದ ದೃಷ್ಟಿಯಿಂದ ಮಲಿನಗೊಳ್ಳದ ಇಲ್ಲಿನ ಲೇಖನಗಳು ಕರ್ನಾಟಕದ ಸ್ಥಳೀಯತೆಯನ್ನು ಪ್ರಾಧಾನ್ಯವಾಗಿಸಿಕೊಂಡು ಜಾಗತಿಕ, ರಾಷ್ಟ್ರೀಯ ವಿದ್ಯಮಾನಗಳನ್ನು ಚರ್ಚೆಗೆ ಒಳಪಡಿಸುತ್ತದೆ. ದಿನೇಶ್ ಅಮೀನ್ ಮಟ್ಟು ಅವರು ಪತ್ರಿಕಾ ಧರ್ಮದನ್ನು ಪಾಲಿಸಿದವರು. ಇದು ಪತ್ರಕರ್ತರಿಗೆ, ಪತ್ರಿಕಾ ಧರ್ಮದ ಬಗ್ಗೆ, ಪ್ರಜಾಪ್ರಭುತ್ವ , ಸಾಮಾಜಿಕ ನ್ಯಾಯ, ಸಮಕಾಲೀನ ರಾಜಕೀಯದ ಸ್ಪಷ್ಟ ಸ್ವರೂಪದ ಬಗ್ಗೆ ವಿವರಗಳನ್ನು ಈ ಕೃತಿಯೂ ಒದಗಿಸುತ್ತದೆ.
ಪತ್ರಕರ್ತ, ಬರಹಗಾರ, ಸಾಮಾಜಿಕ ಚಿಂತಕ ದಿನೇಶ್ ಅಮೀನ್ ಮಟ್ಟು ಅವರು ಅವರ ಪ್ರಖರ ಲೇಖನಗಳ ಮೂಲಕವೇ ಪರಿಚಿತರು. ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ಅಂಕಣಕಾರರಾಗಿ ಕೆಲಸ ಮಾಡಿರುವ ಇವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾಧ್ಯಮ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿರುವ ಇವರು ಬರೆದ ಕೃತಿಯೆಂದರೆ ಪ್ರಜಾವಾಣಿಯಲ್ಲಿ ದೆಹಲಿ ನೋಟ ಅಂಕಣದಲ್ಲಿ ಪ್ರಕಟಗೊಂಡ ಲೇಖನಗಳ ಸಂಕಲಿತ ರೂಪ ದೆಹಲಿ ನೋಟ. ...
READ MORE