‘ಉರುಳಿದ ಕಟ್ಟಡ ಮರಳಿದ ನೆನಪು’ ಶಶಿಧರ ಹಾಲಾಡಿ ಅವರ ಅಂಕಣ ಬರಹಗಳ ಸಂಕಲನ. ಇಲ್ಲಿನ ಬರಹಗಳಿಗೆ ಸುಲಲಿತವಾಗಿ ಓದಿಸಿಕೊಳ್ಳುವ ಗುಣವಿದೆ ಎಂಬುದನ್ನು ನೀವೇ ಗುರುತಿಸಬಲ್ಲಿರಿ. ಉದಾಹರಣೆಗಾಗಿ, ಈ ಸಂಕಲನದಲ್ಲಿರುವ ಕೆಲವು ಬರಹಗಳನ್ನು ಗಮನಿಸಿ: ಈ ಬಂದೂಕು ಕೈಗೆತ್ತಿಕೊಂಡ ಮೇಸ್ಟ್ರು: ತನ್ನ ತಲೆಬರಹದಿಂದಲೇ ಗಮನ ಸೆಳೆಯುವ ಈ ಲೇಖನವು, ನಮ್ಮ ದೇಶದ ಹಿತಕ್ಕಾಗಿ ಹೋರಾಡಿ, ಹುತಾತ್ಮರಾದ ಅಧ್ಯಾಪಕರೊಬ್ಬರ ಕಥನವನ್ನು ಹೊಂದಿದೆ. ಇಬ್ಬರು ರಾಣಿಯರ ತಲೆ ಕಡಿಸಿದ ರಾಜ: ಇಂತಹ ವಿದ್ಯಮಾನಗಳೂ ಸಹ ನಡೆಯಬಲ್ಲವೆ ಎಂಬಷ್ಟು ಅಚ್ಚರಿ ಹುಟ್ಟಿಸುವ ಲೇಖನಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.
ಶಶಿಧರ ಹಾಲಾಡಿ ಅವರು ಲೇಖಕರು. ವಿಶ್ವವಾಣಿ ಪತ್ರಿಕೆಯ ಪುರವಣಿ ವಿಭಾಗದ ಮುಖ್ಯ ಉಪಸಂಪಾದಕರು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯವರು. ಮೈಸೂರು ವಿ.ವಿ.ಯಿಂದ ಎಂ.ಎ. (ಕನ್ನಡ) ಚಿನ್ನದ ಪದಕದೊಂದಿಗೆ ಮೊದಲ ರ‍್ಯಾಂಕ್ ಪಡೆದಿದ್ದು, ಸಣ್ಣ ಕಥೆ, ಪ್ರವಾಸ ಕಥನ, ಕವನ, ನುಡಿಚಿತ್ರ, ಅಂಕಣ ಬರಹ ಮತ್ತು ಲೇಖನಗಳನ್ನು ಬರೆದಿದ್ದಾರೆ. ಶಿವಮೊಗ್ಗದ ನಾವಿಕ ದಿನಪತ್ರಿಕೆಯಲ್ಲಿ 12 ವರ್ಷ ಕಾಲ ಅಂಕಣಕಾರರು. ಪರಿಸರ , ಪಕ್ಷಿವೀಕ್ಷಣೆ, ಚಾರಣ (ಹಿಮಾಲಯದಲ್ಲಿ ಚಾರಣ ನಡೆಸಿದ ಅನುಭವ ಛಾಯಾಗ್ರಹಣ (ರಾಜ್ಯ ಮಟ್ಟದ ಲ್ಯಾಂಡ್‍ಸ್ಕೇಪ್ ಛಾಯಾಚಿತ್ರ ಸ್ಪರ್ಧೆಯಲ್ಲಿ ಮೂರನೆಯ ಬಹುಮಾನ), ಅಂಕಣ ಬರಹ, ಸಣ್ಣ ಕಥೆ ರಚನೆ ಇವರ ಆಸಕ್ತಿಯ ಕ್ಷೇತ್ರಗಳು. ಕೃತಿಗಳು: ನ್ಯಾಯಾಶಾಸ್ತ್ರಜ್ಞ ಸರ್ ಬೆನಗಲ್ ನರಸಿಂಗ ರಾವ್ ಕುರಿತು ಜೀವನ ...
READ MORE