‘ಮಿಂಚು ಸೆಂಚುರಿ’ ಕಿಶೋರ ಲೇಖಕ ಅಂತಃಕರಣ ಅವರ ಕ್ರೀಡಾ ಅಂಕಣ ಪ್ರಬಂಧಗಳ ಸಂಕಲನ. ಆಟಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಮಾತ್ರ ಲೇಖಕರು ತಮ್ಮ ತೀವ್ರ ಆಸಕ್ತಿಯನ್ನು ಸೀಮಿತವಾಗಿಸದೆ, ಕ್ರೀಡೆಗಳ ಹಿಂದಿರುವ ಆರ್ಥಿಕ ಆಯಾಮ, ಹಣ ಹಾಗೂ ಪುರಸ್ಕಾರಗಳು ಆಟಗಾರರನ್ನು ಪ್ರಭಾವಿಸುವ ಬಗೆ, ಅವರ ಸಾಮರ್ಥ್ಯವನ್ನು ಹೆಚ್ಚಿಸುವ ರೀತಿ, ಇವೆಲ್ಲವುಗಳ ಒಟ್ಟಾರೆ ಅವಲೋಕನದಲ್ಲಿ ಅವು ದೇಶಕ್ಕೆ ಮತ್ತು ಮುಖ್ಯವಾಗಿ ಕ್ರೀಡೆಗೆ ತರುವ ವೈಭವಗಳ ಕುರಿತು ಆಳವಾಗಿ ಚಿಂತಿಸಿದ ಪ್ರಬಂಧಗಳಾಗಿವೆ.
ಅಂತಃಕರಣ ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...
READ MORE