`ಅರೆಖಾಸಗಿ’ ವಿಷ್ಣು ನಾಯ್ಕ ಅವರ ರಚನೆಯ ಅಂಕಣ ಸಾಹಿತ್ಯವಾಗಿದೆ. ಒಬ್ಬ ವ್ಯಕ್ತಿ ತನ್ನ ಬಗ್ಗೆ ಮಾತ್ರ ಹೇಳಿಕೊಳ್ಳುವಂತೆ ಮೇಲ್ನೋಟಕ್ಕೆ ಕಂಡರೂ ಈ ಅನುಭವಗಳು ಅವರಿಗಾಗಿದ್ದು ಸಾರ್ವಜನಿಕ ಸಾಮಾಜಿಕ ವ್ಯವಸ್ಥೆಗಳಿಂದಲೇ ಎಂಬುದನ್ನು ಗಮನಿಸಬೇಕು. 'ಸಕಾಲಿಕ' ಸಾಪ್ತಾಹಿಕದಲ್ಲಿ ಬಂದ ಬರಹಗಳ ಪುಸ್ತಕ ರೂಪದ ಸಂಗ್ರಹವಾಗಿದೆ.
ವಿಷ್ಣು ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಅಂಬಾರಕೊಡ್ಲದಲ್ಲಿ 1944 ಜುಲೈ 1ರಂದು ಜನಿಸಿದರು. ತಾಯಿ ಬುದವಂತಿ, ತಂದೆ ನಾಗಪ್ಪ. ಅಂಬಾರಕೊಡ್ಲ ಹಾಗೂ ಅಂಕೋಲಾದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಜಾನಪದ ಸಾಹಿತ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸಾಹಿತಿ, ಸಂಪಾದಕ, ಪ್ರಕಾಶಕ, ಸಂಘಟಕ ಹೀಗೆ ಅನೇಕ ಕ್ಷೇತ್ರದಲ್ಲಿ ಕೃಷಿ ಸಾಧಿಸಿದ್ದಾರೆ. ರಾಘವೇಂದ್ರ ಪ್ರಕಾಶನದ ಮಾಲೀಕರು ಆಗಿದ್ದ ಇವರು ಬರೆದ ಪ್ರಮುಖ ಕೃತಿಗಳೆಂದರೆ ಸುಮನ, ಆ ರೀತಿ ಈ ರೀತಿ, ನನ್ನ ಅಂಬಾರಕೊಡಲು, ವಾಸ್ತವ, ಹೊಸಭತ್ತ ಮುಚ್ಚಿದ ಬಾಗಿಲು ಮತ್ತು ಮರಿಗುಬ್ಬಿ, ನೋವು ...
READ MOREಹೊಸತು -ಜನವರಿ-2005
'ಸ್ನೇಹಪರ ನಿಲುವು ಮತ್ತು ಕ್ರಿಯಾಶೀಲ ವ್ಯಕ್ತಿತ್ವ' ದಿಂದ ಹಿರಿಯ-ಕಿರಿಯ ಮಿತ್ರವೃಂದವನ್ನು ಸಂಪಾದಿಸಿದ ಅಂಬಾರ ಕೊಡ್ಲದ ಶ್ರೀ ವಿಷ್ಣು ನಾಯ್ಕರ ಅಂಕಣ ಬರಹಗಳು, ಸ್ವಂತ ಬದುಕಲ್ಲಿ ಸಹಜವಾಗಿ ನಡೆದುಹೋದ ಘಟನೆಗಳಿಂದ ಹೆಕ್ಕಿ ತೆಗೆದಿರುವ ಅಸಂಖ್ಯಾತ ನೆನಪುಗಳ ಗೊಂಚಲುಗಳು. ತಾವೆಷ್ಟೇ ಮೇಲಕ್ಕೇರಿದರೂ ತಲುಪಿದ ಎತ್ತರದ ತಳಹದಿಯಾದ ಮೊದಲ ಮೆಟ್ಟಿಲನ್ನು ಹಿಂತಿರುಗಿ ನೋಡುವುದು ಕೃತಜ್ಞತೆ ಮತ್ತು ಸಜ್ಜನಿಕೆಯ ಲಕ್ಷಣ. ಬಾಳಿನ ವಿಲಕ್ಷಣ ಘಟನೆಗಳನ್ನು ಮೆಲುಕು ಹಾಕುವುದೂ ಒಂದು ರೋಚಕ ಅನುಭವ. ಇದು ಒಬ್ಬ ವ್ಯಕ್ತಿ ತನ್ನ ಬಗ್ಗೆ ಮಾತ್ರ ಹೇಳಿಕೊಳ್ಳುವಂತೆ ಮೇಲ್ನೋಟಕ್ಕೆ ಕಂಡರೂ ಈ ಅನುಭವಗಳು ಅವರಿಗಾಗಿದ್ದು ಸಾರ್ವಜನಿಕ ಸಾಮಾಜಿಕ ವ್ಯವಸ್ಥೆಗಳಿಂದಲೇ ಎಂಬುದನ್ನು ಗಮನಿಸಬೇಕು. 'ಸಕಾಲಿಕ' ಸಾಪ್ತಾಹಿಕದಲ್ಲಿ ಬಂದ ಬರಹಗಳ ಪುಸ್ತಕ ರೂಪದ ಸಂಗ್ರಹವಿದು.