ಮಲ್ಲಿಕಾರ್ಜುನ ಕಡಕೋಳ ಅವರ ಅಂಕಣ ಬರಹಗಳ ಕೃತಿ ’ಯಡ್ರಾಮಿ ಸೀಮೆ ಕಥನಗಳು’. ಬಟಾಬಯಲ ಬದುಕಿನ ಅಸದಳ ಸಂಕಟ, ಅಸಹಾಯಕತೆಗೆ ಕಾರಣರಾದ ಆಳರಸರ ದರ್ಪ-ದಬ್ಬಾಳಿಕೆ, ಪುರೋಹಿತಶಾಹಿ, ಜಮೀನ್ದಾರಿ ವ್ಯವಸ್ಥೆಯ ಕ್ರೌರ್ಯಗಳನ್ನು ಅನಾವರಣಗೊಳಿಸುವ ಪ್ರಯತ್ನವನ್ನು ಮಲ್ಲಿಕಾರ್ಜುನ ಅವರು ಈ ಕೃತಿಯಲ್ಲಿ ಮಾಡಿದ್ದಾರೆ. ತಣ್ಣಗಿನ ಜಾತಿ ಕ್ರೌರ್ಯದ ಆಳ, ಜಮೀನ್ದಾರಿ ವ್ಯವಸ್ಥೆಯಡಿ ಸಿಲುಕಿ ನರಳುವ ಜನರ ಬದುಕು, ನೋವು, ಅಸಹಾಯಕತೆಯನ್ನು ಲೇಖಕರು ವಿವರಿಸಿದ್ದಾರೆ. ಕಾಲ ಬದಲಾದಂತೆ ಜಾತಿ ವ್ಯವಸ್ಥೆಯೂ ತನ್ನ ಕರಾಳ ರೂಪವನ್ನು ಬದಲಿಸುತ್ತಿದೆ. ಪುರುಷಾಧಿಪತ್ಯ ಹಾಗೂ ಪುರೋಹಿತಶಾಹಿ ಧೋರಣೆಯ ಜಮೀನ್ದಾರಿ ಪದ್ಧತಿಯ ಹಿಂದಿನ ಕರಾಳ ಮುಖಗಳು ಈ ಕೃತಿಯಲ್ಲಿ ಅನಾವರಣಗೊಂಡಿವೆ.
ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬರಹಗಾರರಾದ ಮಲ್ಲಿಕಾರ್ಜುನ ಕಡಕೋಳ ಅವರು ಜನಿಸಿದ್ದು 1956 ಅಕ್ಟೋಬರ್ 2ರಂದು. ಹುಟ್ಟೂರು ಗುಲ್ಬರ್ಗ ಜಿಲ್ಲೆಯ ಕಡಕೋಳ. ತಂದೆ ಸಾಧು, ತಾಯಿ ನಿಂಗಮ್ಮ. ಹುಟ್ಟೂರು, ಯಡ್ರಾಮಿ ಹಾಗೂ ಗುಲ್ಬರ್ಗದಲ್ಲಿ ಶಿಕ್ಷಣ ಪಡೆದ ಇವರು ಆರೋಗ್ಯ ಇಲಾಖೆಯಲ್ಲಿ ಬೋದಕರಾಗಿ, ಹಿರಿಯ ಆರೋಗ್ಯ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆಯನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿ ರಾಜ್ಯ ಪ್ರಶಸ್ತಿ, ದಾವಣಗೆರೆ ಮಹಾನಗರಪಾಲಿಕೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೈವಾರ ನಾರಾಯಣ ತಾತ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಕರ್ನಾಟಕ ನಾಟಕ ಅಕಾಡೆಮಿ ...
READ MOREಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ 2019