ಏಷಿಯಾದ ರಾಷ್ಟ್ರಗಳಾದ ಭಾರತ ಮತ್ತು ಚೀನಾಗಳ ನಡುವಿನ ಗಡಿ ವಿಶ್ವದ ಅತ್ಯಂತ ಶಸ್ತ್ರಸಜ್ಜಿತ ಗಡಿಯಾಗಿ ಬದಲಾಗಿದ್ದು, ಈ ಗಡಿ ಐವತ್ತರ ದಶಕದ ಉತ್ತರಾರ್ಧದಲ್ಲಿ ಹೆಚ್ಚಿನ ಮುನ್ಸೂಚನೆಯಿಲ್ಲದೇ ಸ್ಫೋಟಿಸಿತು ಹಾಗೂ ಅಂತಿಮವಾಗಿ ಗಡಿ ಸಮಸ್ಯೆ ಇಂದಿಗೂ ಬಗೆಹರಿಯದೇ ಉಳಿದುಕೊಂಡಿದೆ ಮತ್ತು ತನ್ನ ಹೈಡ್ರಾ ತಲೆಯನ್ನು ಆಗಾಗ ಎತ್ತಿ ಎರಡೂ ದೇಶಗಳ ನಡುವಿನ ಶಾಂತಿಯನ್ನು ಕಲಕುತ್ತಿರುವ ಹಿನ್ನೆಲೆಯೊಂದಿಗೆ, ಭಾರತ - ಚೀನಾ ಗಡಿಸಮಸ್ಯೆಯ ಇತಿಹಾಸ ಮತ್ತು ಸ್ವರೂಪ ವಿಶ್ಲೇಷಿಸಲು ಈ ಕೃತಿಯಲ್ಲಿ ಪ್ರಯತ್ನಿಸಲಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಹೊಸ, ಅಸಾಂಪ್ರದಾಯಿಕ ದೃಷ್ಟಿಕೋನ ಮತ್ತು ವಿಶ್ಲೇಷಣಾ ಪರಿಕರಗಳ ಸಹಾಯದಿಂದ ಸಮಸ್ಯೆಯ ವಾಸ್ತವಿಕತೆಯನ್ನೇ ಪ್ರಶ್ನಿಸಲು ಈ ಕೃತಿ ಪ್ರಯತ್ನಿಸುತ್ತದೆ. ಇಪ್ಪತ್ತೊಂದನೆಯ ಶತಮಾನದಲ್ಲಿ ಈ ಎರಡು ಬೃಹದ್ ರಾಷ್ಟ್ರಗಳ ನಡುವಿನ ವೈಮನಸ್ಯ ಹಿಮಾಲಯದ ಗಡಿಯಿಂದ ಹಿಂದೂಮಹಾಸಾಗರಕ್ಕೆ ವರ್ಗಾಯಿಸಲ್ಪಟ್ಟಿದೆಯೇ, ಹಾಗಿದ್ದರೆ ಈ ಹೊಸ ವಸ್ತುಸ್ಥಿತಿಯ ಸ್ವರೂಪಗಳೇನು, ಭಾರತದ ಮೇಲೆ ಇದರ ದೂರಗಾಮಿ ಪರಿಣಾಮಗಳೇನು ಎಂಬ ಮಹತ್ವದ ಹಾಗೂ ಸಮಕಾಲೀನ ಪ್ರಶ್ನೆಗಳನ್ನೂ ಈ ಕೃತಿ ವಿಶ್ಲೇಷಣೆಗೆ ತೆರೆಯುತ್ತದೆ. ವಿಜಯ ವಾಣಿ ದಿನಪತ್ರಿಕೆಯಲಲ್ಲಿ ಪ್ರಕಟವಾದ ಲೇಖನ ಸರಣಿಯ ಸಂಗ್ರಹವಾಗಿದೆ.
©2024 Book Brahma Private Limited.