ಮಲ್ಲಿನಾಥನ ಧ್ಯಾನ

Author : ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ)

Pages 304

₹ 162.00




Year of Publication: 2012
Published by: ವಸಂತ ಪ್ರಕಾಶನ
Address: ನಂ 360, 10ನೇ ಬಿ- ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-11

Synopsys

ಮಲ್ಲಿನಾಥನ ಧ್ಯಾನ-ಲೇಖಕಿ ವೈದೇಹಿ ಅವರು ಲಂಕೇಶ ಪತ್ರಿಕೆಗೆ ಬರೆದ ಅಂಕಣಗಳ ಸಂಗ್ರಹ ಕೃತಿ. ಭಾವತೀವ್ರತೆಯನ್ನು ತಿಳೀ ಹಾಸ್ಯದಟಿ ದಾಖಲಿಸುವ ಪ್ರಯತ್ನ ಇಲ್ಲಿ ಕಾಣಬಹುದು. ಮನದೊಳಗೆ ಮೂಡುವ ವಿಚಾರ ಲಹರಿಗೆ, ಅದರ ಎಲ್ಲ ಮಗ್ಗಲನ್ನು ಸ್ಪರ್ಶಿಸಿ, ಅನುಭವಿಸಿ ಬರೆಯುವ ರೀತಿ ತುಂಬಾ ಆಪ್ತ ಎನಿಸುತ್ತದೆ. ಸ್ವಚ್ಚಂದವಾಗಿ ಹರಿಯುವ  ಇಲ್ಲಿಯ ವಿಚಾರಗಳಿಗೆ ಕಣ್ಣಿಗೆ ಕಟ್ಟುವಂಥ ಚಿತ್ರಕ ಶಕ್ತಿ ಇದೆ. ಒಂದಕ್ಕೊಂದನು ಪೋಣಿಸುವ ಮೂಲಕ ಒಳ ಸಂಬಂಧಗಳನ್ನು ಧ್ವನಿಸುವ ಪ್ರತಿಭೆ ಇದೆ. ಸಾಹಿತ್ಯಕ ಹಾಗೂ ಮಾನವೀಯ ಜಾಣ್ಮೆಯಿಂದ ಬರಹಗಳು ಓದಿಸಿಕೊಂಡು ಹೋಗುತ್ತವೆ. 

About the Author

ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ)
(12 February 1945)

ಡಾ. ವೈದೇಹಿ ಅವರ ಮೂಲ ಹೆಸರು ಜಾನಕಿ ಶ್ರೀನಿವಾಸಮೂರ್ತಿ.  ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದ ಅವರು ಕಾವ್ಯ, ಪ್ರಬಂಧ, ಮಕ್ಕಳ ಸಾಹಿತ್ಯ, ಜೀವನಚಿತ್ರ, ಕೃತಿ ಸಂಪಾದನೆ ಪ್ರಕಾರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಮಾನವ ಸಹಜ ಸಂಬಂಧಗಳು ಮತ್ತು ಹೆಣ್ಣಿನ ಭಾವತರಂಗಗಳನ್ನು ಹಿಡಿದಿಡುವ ಕಥೆ-ಕಾದಂಬರಿ ರಚಿಸಿರುವ ಲೇಖಕಿ. ಮರಗಿಡಬಳ್ಳಿ ಅಂತರಂಗದ ಪುಟಗಳು ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗಳು, ಅಮ್ಮಚ್ಚಿ ಎಂಬ ನೆನಪು. ಕತೆ ಕತೆ ಕಾರಣ (ಕಥಾ ಸಂಕಲನಗಳು), ಅಲೆಗಳಲ್ಲಿ ತರಂಗ (ಸಮಗ್ರ ಕಥಾ ಸಂಕಲನ), ಬಿಂದು ಬಿಂದಿಗೆ, ಪಾರಿಜಾತ ಹೂವ ಕಟ್ಟುವ ಕಾಯಕ (ಕವನ ಸಂಕಲನ), ಅಸ್ಪೃಶ್ಯರು (ಕಾದಂಬರಿ), ಮಲ್ಲಿನಾಥನ ಧ್ಯಾನ, ಮೇಜು ಮತ್ತು ...

READ MORE

Related Books