ಸಮಕಾಲೀನ ಸಾಮಾಜಿಕ, ರಾಜಕೀಯ ಹಾಗೂ ಮಹಿಳಾ ಜೀವನ ಸ್ಥಿತಿಗತಿಗಳ ವಿಶ್ಲೇಷಣೆ ದೆಹಲಿ ನೋಟ ಕೃತಿಯ ಲೇಖನಗಳಲ್ಲಿವೆ. ಬಿಹಾರದ ಬಾಲಿಕಾಗೃಹದಲ್ಲಿ ನಡೆಯುತ್ತಿದ್ದ ಕ್ರೌರ್ಯ, ಮೇಧಾ ಪಾಟ್ಕರ್ ಅವರ ಕುರಿತ ಲೇಖನ ಹೀಗೆ ಅವರ ಪ್ರತಿಯೊಂದು ಅಂಕಣ ಬರಹವೂ ಸರ್ಕಾರವನ್ನು ವಿಮರ್ಶಿಸುವಂತಿದೆ. ಮಾನವೀಯ ನೆಲೆಗಟ್ಟಿನಲ್ಲಿ ರಚಿತವಾಗಿರುವ ಈ ಅಂಕಣ ಬರಹಗಳು ಇಂದಿನ ವಾಸ್ತವದ ಕುರಿತು ಕಣ್ತೆರೆಸುತ್ತವೆ.
ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದಿಸುವ ಡಿ. ಉಮಾಪತಿಯವರ ಈ ಅಂಕಣ ಬರಹಗಳು ಓದುಗರನ್ನು ಯೋಚನೆಗೆ ದಾರಿ ಮಾಡುವುದಂತೂ ನಿಜ. ಈ ಕೃತಿಯಲ್ಲಿನ ಪ್ರತಿಯೊಂದು ಲೇಖನದ ಬರಹ ಆಳ, ಅದರ ಕ್ರೌರ್ಯ, ಅಮಾನವೀಯತೆಯನ್ನು ವಿವರಿಸುವುದರೊಂದಿಗೆ, ಕಣ್ಣಿದ್ದು ಕುರುಡರಂತಿರುವ ಜನಸಾಮಾನ್ಯರು, ನನಗೂ ಸಮಾಜಕ್ಕೂ ಸಂಬಂಧವೇ ಇಲ್ಲದಂತೆ ದುರಾಡಳಿತ ನಡೆಸುತ್ತಿರುವ ಸರ್ಕಾರದ ನಡೆಯನ್ನು ಪ್ರಶ್ನಿಸುವಂತಿವೆ.
ಡಿ. ಉಮಾಪತಿಯವರು ಕನ್ನಡದ ಉತೃಷ್ಟ ಲೇಖಕರಲ್ಲೊಬ್ಬರು. ಪತ್ರಕರ್ತರು, ಬರಹಗಾರರು ಆಗಿರುವ ಅವರು ಮೊದಲು ಕನ್ನಡ ದೈನಂದಿನ ಪತ್ರಿಕೆಯಾದ ಕನ್ನಡ ಪ್ರಭದಲ್ಲಿ ಪತ್ರಕರ್ತರಾಗಿದ್ದು ನಂತರ ಪ್ರಜಾವಾಣಿಯಲ್ಲಿ ದೆಹಲಿಯ ವರದಿಗಾರರಾಗಿ ಕೆಲಸ ನಿರ್ವಹಿಸಿದ್ದಾರೆ. ಪ್ರಜಾವಾಣಿಯಲ್ಲಿ “ದೆಹಲಿ ನೋಟ” ಎಂಬ ಅಂಕಣ ಬರೆಯುತ್ತಿದ್ದರು. ಅದೇ ಅಂಕಣದ ಹೆಸರಿನ ಪುಸ್ತಕವನ್ನು ಸಹ ಪ್ರಕಟಿಸಿದ್ದಾರೆ. ಪ್ರಸ್ತುತ ’ನ್ಯಾಯ ಪಥ’ ಪತ್ರಿಕೆಯಲ್ಲಿ ಕನ್ಸಲ್ಟಿಂಗ್ ಎಡಿಟರ್‌ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ...
READ MORE