‘ತಲೆಮಾರಿನ ತಲ್ಲಣ’ ನಳಿನಿ.ಡಿ ಅವರ ಅಂಕಣ ಬರಹಗಳಾಗಿವೆ. ಲೇಖಕಿ ನಳನಿ ಡಿ. ಅವರ ಈ ಅಂಕಣ ಬರಹಗಳು ಸಾಮಾಜಿಕ ಅನಿಷ್ಠ ಪದ್ಧತಿಯ ವಿರುದ್ಧದ ಸಾಂಸ್ಕೃತಿಕ ಸಂಕಥನದಂತಿವೆ. ಇಲ್ಲಿನ ಬಹುತೇಕ ಬರಹಗಳಲ್ಲಿ ಸ್ತ್ರೀ ಸಂವೇದನೆಗಳು ಢಾಳವಾಗಿವೆ. ಸಾಮಾಜಿಕ ಮೌಲ್ಯಗಳು ಮತ್ತು ಪ್ರಸ್ತುತ ಸಾಮಾಜಿಕ ಪಿಡುಗು ಮತ್ತು ವೈಚಾರಿಕತೆಯ ನೆಲೆಯಲ್ಲಿ ತಮ್ಮದೆ ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ. ಕೆಲವು ಬರಹಗಳಲ್ಲಿ ಕಾವ್ಯಸ್ಪರ್ಶದ ಭಾಷೆ ಇದೆ. ಮಹಿಳೆಯರು ಅನುಭವಿಸುವ ಮಾನಸಿಕ ಸಂಕಷ್ಟಗಳ ಕುರಿತು ಬರೆದ ಬಹುತೇಕ ಬರಹಗಳಲ್ಲಿ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೆ 'ಮುಟ್ಟು ತಟ್ಟದೇ' ಲೇಖನದಲ್ಲಿ ಮುಟ್ಟಿನ ಕುರಿತು ಮಹಿಳೆಯರಿಗೆ ಅದರ ಸಮಸ್ಯೆ ಮತ್ತು 'ಮುಟ್ಟಿನ ರಜೆ' ಕುರಿತು ರಾಜ್ಯಸರ್ಕಾರ ಮಹಿಳೆಯರಿಗೆ ಈ ಸಂದರ್ಭದಲ್ಲಿ ರಜೆ ನೀಡಲು ಸಾಧ್ಯವೇ? ಎಂದು ಕೇಳರುವ ಪ್ರಶ್ನೆ ನಿಜಕ್ಕೂ ಅರ್ಥಪೂರ್ಣವಾಗಿದೆ. ಹಾಗಾಗಿಯೇ ಒಟ್ಟಾರೆಯ ಲೇಖನಗಳು ಸ್ತ್ರೀ ಸಂವೇದನೆಯ ವೈಚಾರಿಕ ನಿಲುವುಗಳು ಇಲ್ಲ ಹೆಚ್ಚು ಧ್ವನಿಸಿವೆ.
ಕವಯತ್ರಿ ನಳಿನ ಡಿ. ಅವರು 1982 ಆಗಸ್ಟ್ 16 ರಂದು ಚಿಕ್ಕಮಂಗಳೂರಿನಲ್ಲಿ ಜನಿಸಿದರು. ಕನ್ನಡಪ್ರಭದ 'ಬೈಟು ಕಾಫಿ'ಗೆ ’ದೋಣಿ ವಿಭಾ’ಕ್ಕೆ ಹಲವಾರು ಪ್ರಮುಖ ಕವಿಗಳ ಸಂದರ್ಶನ ಮಾಡಿದ್ದಾರೆ. ಅವರ ಮಹಿಳಾ ಪರವಾದ ಹತ್ತಾರು ಲೇಖನಗಳನ್ನು ಕನ್ನಡದ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ಭಾವ-ಬೆಳಕು' ಅಂಕಣ ಸುವರ್ಣ ಟೈಮ್ಸ್ ಆಫ್ ಕರ್ನಾಟಕದಲ್ಲಿ ಪ್ರಕಟವಾಗಿತ್ತು. ರೆಡ್ ಲೈಟ್ ಮತ್ತಿತರ ಕವನಗಳು ಎಂಬ ಪುಸ್ತಕವು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಪಡೆದು ಪ್ರಕಟವಾಗಿದೆ. ಕರ್ನಾಟಕ ಲೇಖಕಿಯರ ಸಂಘದಿಂದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ ಪ್ರಶಸ್ತಿ ಲಭಿಸಿದೆ. ...
READ MORE