ಇಂಗ್ಲಿಷ್ ನಲ್ಲಿ ಬರೆಯುತ್ತಿದ್ದ ಗೌರಿ ಲಂಕೇಶ್ ಕನ್ನಡದ ಬರಹಗಾರ್ತಿಯಾಗಿ ಬೇರು ಬಿಟ್ಟಿದ್ದು ನಿಧಾನವಾಗಿ. ಲಂಕೇಶರ ಪತ್ರಿಕೆಯ ಸಂಪಾದಕಿಯಾದ ನಂತರ, ಒಂದು ರೀತಿಯ ಅನಿವಾರ್ಯತೆಗೊಳಗಾಗಿ. ಆನಂತರ ಯುವಜನರ ಮಾರ್ಗದರ್ಶಿ ಗೈಡ್ ಪತ್ರಿಕೆಯನ್ನೂ ಹೊರತಂದಿದ್ದಲ್ಲದೆ ಒಂದು ಪೂರ್ಣ ಪ್ರಮಾಣದ ಪ್ರಕಾಶನ ಸಂಸ್ಥೆಯನ್ನೇ ಆರಂಭಿಸಿ ನಿಭಾಯಿಸಿದರು. ಅವರ ವಿಚಾರಗಳಿಗಾಗಿ ಅವರನ್ನು ಕೊಂದವರು, ಗೌರಿಯವರ ದನಿಯನ್ನು ಅಡಗಿಸುವ ಉದ್ದೇಶ ಹೊಂದಿದ್ದರಿಂದ, ಆ ದನಿ ಅಡಗದೇ ನೋಡಿಕೊಳ್ಳುವುದು ಗೌರಿಯವರ ಒಡನಾಡಿಗಳ ಕರ್ತವ್ಯವಾಗಿತ್ತು. ಹಾಗಾಗಿ ಗೌರಿ ಲಂಕೇಶ್ ಪತ್ರಿಕೆಯು ‘ನ್ಯಾಯಪಥ’ವಾಗಿ ಮುಂದುವರೆಯಿತು.
ಗೌರಿಯವರು ಮಾಡಬೇಕೆಂದುಕೊಂಡು ಯೋಚಿಸಿ ಆಗದೇ ಹೋಗಿದ್ದ ವೆಬ್ ಪೋರ್ಟಲ್ ನಾನುಗೌರಿ.ಕಾಂ ಆಗಿ ರೂಪು ತಳೆದಿದೆ. ಇಂಗ್ಲಿಷ್ ವೆಬ್ ಸೈಟ್ gaurilankeshnews.com ಸಹಾ ಆರಂಭವಾಗಿದೆ. ಇದೀಗ ಪ್ರಕಾಶನದ ಸರದಿ. ಗೌರಿ ಮೀಡಿಯಾ ಟ್ರಸ್ಟ್ ತನ್ನ ಮೊದಲ ಪುಸ್ತಕವಾಗಿ ಗೌರಿ ಲಂಕೇಶರ ಸಂಪಾದಕೀಯ ಬರಹಗಳ ಸಂಗ್ರಹವಾದ ‘ಕಂಡಹಾಗೆ-4’ಅನ್ನು ಹೊರತರುತ್ತಿದೆ. ಇದಕ್ಕೆ ಮುಂಚೆ ಅದರ ಮೂರು ಸಂಪುಟಗಳು ಬಿಡುಗಡೆಯಾಗಿದ್ದವು.
ಈ ಪುಸ್ತಕ ಪ್ರಕಟಣೆಗೆ ಗೌರಿಯವರ ಸಹಪಾಠಿಯಾಗಿದ್ದ ಗುರುಮೂರ್ತಿಯವರು ನೆರವಾಗಿದ್ದಾರೆ. ಈ ಕೃತಿಯಲ್ಲಿ 2012-2013ರ ಅವಧಿಯಲ್ಲಿ ಗೌರಿ ಲಂಕೇಶ್ ಪತ್ರಿಕೆಗಾಗಿ ಬರೆದ ಸಂಪಾದಕೀಯ ಬರಹಗಳಿವೆ. ಈ ಲೇಖನ ಸಂಕಲವನ್ನು ಎಂ.ಎಸ್. ಆಶಾದೇವಿಯವರು ಸಂಪಾದಿಸಿದ್ದಾರೆ.
ಅನುವಾದಕಿ, ವಿಮರ್ಶಕಿ ಆಶಾದೇವಿ ಅವರು 1966 ಫೆಬ್ರವರಿ 26 ದಾವಣಗೆರೆ ಜಿಲ್ಲೆಯ ನೇರಳಿಗೆಯಲ್ಲಿ ಜನಿಸಿದರು. ತಂದೆ ಸೋಮಶೇಖರ್, ತಾಯಿ ಅನಸೂಯಾ. ಚನ್ನಗಿರಿ ಸಮೀಪದ ಹಿರೇಕೋಗಲೂರಿನವರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಡಿ.ಆರ್.ನಾಗರಾಜ್ ಮಾರ್ಗದರ್ಶನದಲ್ಲಿ ನವೋದಯ ವಿಮರ್ಶೆ ಮೇಲೆ ಪಾಶ್ಚಾತ್ಯ ವಿಮರ್ಶೆಯ ಪ್ರಭಾವ ಕುರಿತು ಪಿ.ಎಚ್ಡಿ. ಸ್ತ್ರೀಮತವನುತ್ತರಿಸಲಾಗದೇ(ಸಾಹಿತ್ಯ ಸಂಸ್ಕೃತಿ ಕುರಿತ ಲೇಖನಗಳು) ಉರಿಚಮ್ಮಾಳಿಗೆ(ಡಿ.ಆರ್.ನಾಗರಾಜ ಅವರ ದಿ ಪ್ಲೇಮಿಂಗ್ ಫೀಟ್ ಕೃತಿಯ ಅನುವಾದ). ವಚನ ಪ್ರವೇಶ( ಸಂಪಾದನೆ). ಭಾರತದ ಬಂಗಾರ ಪಿ.ಟಿ.ಉಷಾ, ಇವರ ಪ್ರಮುಖ ಕೃತಿಗಳು. ವಿವಿಧ ಸೆಮಿನಾರುಗಳಲ್ಲಿ ಪ್ರಬಂಧ ಮಂಡನೆ. ಪ್ರಸ್ತುತ ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ...
READ MORE