ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅವರು ಪ್ರಜಾವಾಣಿಯಲ್ಲಿ ಬರೆಯುತ್ತಿದ್ದ ಕರುಣಾಳು ಬಾ ಬೆಳಕೆ ಅಂಕಣದ ಭಾಗ-1 ರಿಂದ 15ರವರೆಗೆ ಇರುವ ಸರಣಿ ಬರೆಹಗಳ ಸಂಕಲನ ಇದು. ಪುಟ್ಟ ಪುಟ್ಟ ಘಟನೆ, ಸನ್ನಿವೇಶ, ವ್ಯಕ್ತಿಗಳ ಮೂಲಕ ಜೀವನ ಸಂದೇಶ ನೀಡುವ ಸ್ವರೂಪದ ಬರೆಹಗಳು ಒಳಗೊಂಡಿದ್ದು, ಓದುಗರ ಮೇಲೆ ಧನಾತ್ಮಕ ಪರಿಣಾಮ ಬೀರುತ್ತವೆ. ನೈತಿಕ ಪ್ರಜ್ಞೆಯನ್ನು ಎಚ್ಚರಿಸುತ್ತವೆ. ಸಾಮಾಜಿಕ ಹೊಣೆಗಾರಿಕೆಯನ್ನು ಹೆಚ್ಚಿಸುತ್ತವೆ. ಸರಣಿಯಲ್ಲಿ ಪ್ರಕಟಗೊಂಡಿದ್ದ ಒಟ್ಟು 15 ಕೃತಿಗಳನ್ನು ಇಲ್ಲಿ ಸಂಕಲಿಸಲಾಗಿದೆ.
©2024 Book Brahma Private Limited.