'ಚಿತ್ರೋದ್ಯಮದ ಚಿತ್ತಾರಗಳು' ಟಿಎನ್ಎಸ್ ಅವರು ಸಂಪಾದಿಸಿರುವ ಕೃತಿ. ಕೃತಿಯ ಕುರಿತು ಬರೆಯುತ್ತಾ 'ಕಿರುತೆರೆ ಅಥವಾ ಚಿತ್ರೋದ್ಯಮದ ಏಳ್ಗೆಗೆ ತಮ್ಮ ಬೆವರ ಹನಿ ಹರಿಸಿದ ಮಹಾನುಭಾವರನ್ನು ನೆನೆಯುವುದೇ ಒಂದು ಪುಣ್ಯದ ಕೆಲಸ. ಇಂತಹ ನೂರಾರು ಜನರ ಇಷ್ಟ-ಕಷ್ಟ-ನಷ್ಟಗಳು, ಅವರ ನೋವು-ನಲಿವುಗಳು, ತೆರೆಯ ಹಿಂದಿನ ಇಂಟೆರೆಸ್ಟಿಂಗ್ ಕತೆಗಳು, ತೆರೆಯ ಮೇಲಿನ ಅದ್ಭುತಗಳನ್ನೆಲ್ಲ ಒಂದೆಡೆ ಕಲೆಹಾಕುವ ಒಂದು ಹೊಸ ಆಸೆ ನನ್ನಲ್ಲಿ ಮೊಳಕೆಯೊಡೆಯಿತು. ಆ ಆಸೆಯ ಪ್ರಯತ್ನವೇ chitrodyama.com ಎಂಬ ವೆಬ್‌ಸೈಟ್. ನನ್ನ ಸ್ವಂತ ಖರ್ಚಿನಲ್ಲಿ, ಈ ವೆಬ್‌ಸೈಟ್ ಅನ್ನು ತೆರೆದು, ಇಂತಹ ಎಷ್ಟೋ ವಿಷಯಗಳನ್ನು ಪ್ರಕಟಿಸಿದ್ದೇವೆ ಎಂದಿದ್ದಾರೆ ಟಿಎನ್ಎಸ್.
ಟಿಎನ್ನೆಸ್ ಅವರು ಚಿತ್ರೋದ್ಯಮದ ಬಗ್ಗೆ ಅನೇಕ ಲೇಖನಗಳನ್ನು ಬರೆಯುವ ಮೂಲಕ ಚಿತ್ರರಂಗಗಳ ಆಸಕ್ತಿದಾಯಕ ವಿಚಾರಗಳನ್ನು ಓದುಗರಿಗೆ ತಲುಪಿಸುವ ಬರಹಗಾರ. ಅವರು chitrodyama.com ಎಂಬ ವೆಬ್‌ಸೈಟ್ ಅನ್ನು ನಿರ್ಮಿಸಿದ್ದಾರೆ. ಕೃತಿಗಳು: ಚಿತ್ರೋದ್ಯಮದ ಚಿತ್ತಾರಗಳು, ನಾನು ನಾನೇನಾ ...
READ MORE