ಹುಲಿಕಲ್‌ ಜಾತ್ರೆ

Author : ಎಂ.ಎಂ.ಪ್ರಭಾಕರ ಕಾರಂತ

Pages 232

₹ 180.00




Year of Publication: 2014
Published by: ಸಾಗರ್‌ ಎಂಟರ್‌ ಪ್ರೈಸಸ್
Address: ನಂ.893/D ನೆಲ ಮಹಡಿ, ಮೂರನೇ ಕ್ರಾಸ್‌, ನೆಹರು ನಗರ, ಮಂಡ್ಯ.
Phone: 9449414542

Synopsys

ಹರಳುಗಟ್ಟಿದ ವಿಚಾರಗಳನ್ನು ಬರಹ ರೂಪದಲ್ಲಿ ಸಾಂದ್ರಿಕರಿಸಿದ, ಅನೇಕ ಘಟನೆಗಳು ಮಿಳಿತಗೊಂಡಿರುವ ಅಂಕಣ ಬರೆಹಗಳ ಸಂಗ್ರಹರೂಪ ’ಹುಲಿಕಲ್ ಜಾತ್ರೆ’. ಒಟ್ಟು 51 ವಿವಧ ರೀತಿಯ ಅಂಕಣ ಬರಹಗಳ ಈ ಪುಸ್ತಕದಲ್ಲಿ, 17ಕ್ಕೂ ಹೆಚ್ಚು ಪುಸ್ತಕಗಳ ಪರಿಚಯವಿದೆ.  'ಅಯೋಧ್ಯ ವಿವಾದ ಮತ್ತೆ ರಂಗಸ್ಥಳಕ್ಕೆ', 'ಎಳೆಯರೆಲ್ಲರ ಪಠ್ಯವಾಗಬೇಕಾಗಿದೆ', ಗಾಂಧೀಜಿ ಹತ್ಯೆ ಮತ್ತು ಗೋಡೆ', 'ಕಾಲ ಮಿತಿಯಾಚೆಯ ಪ್ರಸ್ತುತತೆ', 'ಕೃತಿಯೊಂದರಲ್ಲಿ ಅರಸಿದ ಸ್ವಾರಸ್ಯ', 'ಒಂದು ಸುಳ್ಳಿನ ಜೊಪತೆಗೆ ನೈಜ ಚರಿತ್ರೆ', 'ಆಧುನಿಕ ರಾಜ ಮಹಾರಾಜರು', ಹೀಗೆ ಹಲವು ಕೃತಿಗಳನ್ನು ಓದಿ ಅದರ ಸಾರ ಸಂಗ್ರಹಿಸಿ ಓದುಗರಿಗೆ ವಿಚಾರಗಳ ತಲುಪಿಸುವ ಕಾರಂತ್ ತಮ್ಮ ಅಭಿಪ್ರಾಯ ನಿಲುವುಗಳನ್ನು ಇಲ್ಲಿ ನೀಡಿದ್ದಾರೆ.

About the Author

ಎಂ.ಎಂ.ಪ್ರಭಾಕರ ಕಾರಂತ

ಪ್ರಭಾಕರ ಕಾರಂತರು ಸಾಮಾಜಿಕ ಕಾರ್ಯಕರ್ತರಾಗಿ, ಪತ್ರಕರ್ತರಾಗಿ, ಸಹೃದಯೀ ಸಾಹಿತ್ಯ ಪ್ರೇಮಿಯಾಗಿ ಬೆಳೆದವರು. ಪಲ್ಲಟಗೊಂಡ ಬದುಕು, ಆಗಿನ ತುಮುಲಗಳು, ಜೊತೆಗೆ ಅವರ ಬಹುಮುಖಿ ಚಟುವಟಿಕೆಗಳು ಅವರ ಅನುಭವದ ಹರವನ್ನು, ಆಳವನ್ನು ಹೆಚ್ಚಿಸಿದೆ. ಹೊಸಕೊಪ್ಪದಂತ ಪುಟ್ಟ ಹಳ್ಳಿಯಲಲ್ಲಿ ಜನಿಸಿದ ಅವರು ಹಿಡಿದು ಕಗ್ಗಾಡಿನ ನಡುವಿನ ಗೀರ್ಲುವಿನ ಹಳ್ಳಿಗನೊಬ್ಬನಾಗಿ ಬಾಳಿದರು. ಎಲ್ಲರ ಬಳಿಯೂ ಯಾವುದೇ ಅಹಂಕಾರ ಅಥವಾ ಕೀಳರಿಮೆಗಳಿಲ್ಲದೇ ಒಡನಾಡಿದ್ದಾರೆ. ಅವರ ಬದುಕಿನಲ್ಲಿನ ಪ್ರಾಮಾಣಿಕತೆ, ಉತ್ತಮ ಸಾಮಾಜಿಕ ಬದುಕಿನ ಬಗ್ಗೆ ಅವರಿಗಿರುವ ತೀವ್ರ ಕಳಕಳಿ, ನಿಷ್ಠೆಗಳು ಅವರ ಬರಹಗಳಲ್ಲೂ ಸಹಜವಾಗಿ ಬಂದಿದೆ. ’ಶೀರ್ನಾಳಿ, ಬೇರು ಪ್ರೀತಿ, ವಿಮರ್ಶಕರ ಅಧ್ವಾನಗಳು’ ಅವರ ಕೃತಿಗಳು.  ...

READ MORE

Related Books