‘ಚಂಪಾ ನೋಟ’ ಲಂಕೇಶ್ ಪತ್ರಿಕೆಗಾಗಿ ಚಂದ್ರಶೇಖರ ಪಾಟೀಲ ಅವರು ಬರೆದಿದ್ದ ಅಂಕಣ ಬರಹಗಳ ಸಂಕಲನ -ಚಂಪಾ ನೋಟ. ಕರ್ನಾಟಕ ಪತ್ರಿಕಾರಂಗದಲ್ಲಿ ಹೊಸ ಹೊಳವುಗಳೊಂದಿಗೆ, ಹೊಸ ಕನಸುಗಳೊಂದಿಗೆ, ಹೊಸ ನುಡಿಗಟ್ಟುಗಳೊಂದಿಗೆ ಕಳೆದ ಶತಮಾನದ ಕೊನೆಯ ಎರಡು ದಶಕಗಳಲ್ಲಿ ಒಂದು ರೀತಿಯ ಕ್ರಾಂತಿಯನ್ನೇ ಮಾಡಿದ್ದು, ಟ್ಯಾಬ್ಲಾಯ್ಡ್ ಲಂಕೇಶ್ ಪತ್ರಿಕೆ.
ಗೋಕಾಕ ಚಳವಳಿ ಮತ್ತು ರೈತ ಚಳವಳಿಗಳಿಗೆ ಮುಖ್ಯ ಪ್ರಾಣವಾಗಿ, ಹೊಸ ಜನಾಂಗದ ಪ್ರತಿಭೆಗಳಿಗೆ ವೇದಿಕೆಯಾಗಿ, ತನ್ನ ಕ್ರಾಂತಿಕಾರಿ ಗುಣದಿಂದಾಗಿ ನಾಡಿನಲ್ಲಿ ರಾಜಕೀಯ ಪಲ್ಲಟ ಉಂಟು ಮಾಡಿದ ಲಂಕೇಶ್ ಪತ್ರಿಕೆಯಲ್ಲಿ ಪ್ರಾರಂಭದ ಸಂಚಿಕೆಯಿಂದಲೂ ಚಂಪಾ ಅಂಕಣಕಾರರಾಗಿದ್ದರು. ಪತ್ರಿಕೆಯೊಂದಿಗೆ ಆತ್ಮೀಯ ನಂಟುಹೊಂದಿದ್ದ ಚಂಪಾ ಅವರ ಎಲ್ಲ ನಮೂನೆಯ ಬರಹಗಳ ಸಂಕಲನವೇ ಈ ಚಂಪಾ ನೋಟ ಕೃತಿ.
'ಚಂಪಾ' ಎಂದೇ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಇರುವ ಚಂದ್ರಶೇಖರ ಪಾಟೀಲರು ಕವಿ-ನಾಟಕಕಾರ. ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಚಳುವಳಿಗಳ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ’ಚಂಪಾ’ ಅವರದು. ಹಾವೇರಿ ಜಿಲ್ಲೆಯ ಹತ್ತೀಮತ್ತೂರಿನಲ್ಲಿ ಜನಿಸಿದರು (1939). ತಂದೆ ಬಸವರಾಜ ಹಿರೇಗೌಡ ಪಾಟೀಲ, ತಾಯಿ ಮುರಿಗೆವ್ವ. ಹತ್ತೀಮುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ, ಹಾವೇರಿಯಲ್ಲಿ ಹೈಸ್ಕೂಲು ಶಿಕ್ಷಣ ಪಡೆದ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಧಾರವಾಡದ ಕರ್ನಾಟಕ ಕಾಲೇಜು ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ 'ಚಂಪಾ' ಅವರ ಅಕ್ಷರಗಳಿಗೆ ಕಾವ್ಯದ ಗರಿ ಮೂಡಿದವು. ಆಗ ಖ್ಯಾತ ಕವಿ ಗೋಕಾಕರು ಕರ್ನಾಟಕ ಕಾಲೇಜಿನಲ್ಲಿದ್ದರು. ’ನಮಗೆಲ್ಲ ...
READ MORE