ಕಿಶೋರ ಲೇಖಕ ಅಂತಃಕರಣ ಅವರ ನೂರು ಕ್ರೀಡಾ ಅಂಕಣ ಪ್ರಬಂಧಗಳ ಸಂಕಲನ ‘ಮಿಂಚು ಸೆಂಚುರಿ-2’. ಅಂತಃಕರಣ ಅವರ ಬರಹದ ಶೈಲಿ ಆಸಕ್ತಿ ಹುಟ್ಟಿಸುತ್ತದೆ. ಪ್ರತಿ ಬರಹದಲ್ಲೂ ಹೆಜ್ಜೆ ಹೆಜ್ಜೆಗೂ ಅಂಕಿ ಅಂಶಗಳ ಆಧಾರ ಸಮೇತ ತನ್ನ ಅಭಿಪ್ರಾಯವನ್ನು ನಮ್ಮ ಮುಂದಿಡುತ್ತಾರೆ. ಆಟಗಾರರ ಹಿನ್ನೆಲೆ, ಬ್ಯಾಟಿಂಗ್-ಬೌಲಿಂಗ್ ಶೈಲಿ, ಅವರ ಶಕ್ತಿ-ದೌರ್ಬಲ್ಯ, ಒಟ್ಟಾರೆ ತಂಡದಲ್ಲಿ ಅವರಿಗಿರುವ ಮಹತ್ವ, ಅವರ ಆಟದ ಒಟ್ಟೂ ಪರಿಣಾಮಗಳನ್ನು ಇಲ್ಲಿಯ ಬರಹಗಳು ದಾಖಲಿಸುತ್ತವೆ.
ಅಂತಃಕರಣ ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...
READ MORE