" ಒಂದೊಳ್ಳೆ ಮಾತು" ರೂಪಾ ಗುರುರಾಜ್ ಅವರ ಅಂಕಣ ಬರದವಾಗಿದೆ. 'ಒಂದೊಳ್ಳೆ ಮಾತು' ಅಂಕಣದಲ್ಲಿ ಒಂದು ಪುಟ್ಟ ಕಥೆಯೊಂದಿಗೆ ಜೋಡಿಸುತ್ತಾ ಹೋಗುವುದು ಯಾವುದೋ ಹೊಸ ಕೆಲಸ ಮಾಡಿದಂತೆ ಎಂದು ಅನಿಸಲೇ ಇಲ್ಲ. ವರ್ಷಗಳಿಂದ ಜೀವನ , ನನ್ನ ಸುತ್ತಲಿರುವ ಕುಟುಂಬದವರು, ನನ್ನ ಸ್ನೇಹ ವಲಯ ಇವರೆಲ್ಲರೊಂದಿಗೆ ನಾನು ಬದುಕಿದ ರೀತಿಯನ್ನೇ ಪದಗಳಲ್ಲಿ ಜೋಡಿಸಿ ಬರೆಯುವ ಹೊಸ ಸಂವಹನ ಈ ಅಂಕಣಗಳ ಮೂಲಕ ಪ್ರಾರಂಭವಾಯಿತು ಎನ್ನಬಹುದಷ್ಟೇ. ಪ್ರತಿಯೊಂದು ಕಥೆಗೂ ನಮ್ಮದೇ ಆದ ದೃಷ್ಟಿಕೋನಗಳಿಂದ ವಿಶ್ಲೇಷಣೆ ಮಾಡುವಾಗ ನಾವು ಆ ಕಥೆಯನ್ನು ಅರ್ಥ ಮಾಡಿಕೊಂಡ ರೀತಿ ಅದು ನಮಗೆ ಕಲಿಸಿದ ಪಾಠ, ಇವು ನಮ್ಮ ಜೀವನದ ಅನುಭವಗಳ ಮೇಲೆ ನಿರ್ಧಾರವಾಗುತ್ತದೆ. ಅದನ್ನೇ ಈಗ ಆರಿಸಿ ಬರೆಯುತ್ತಿರುವ ಒಂದೊಂದು ಕಥೆಯ ವಿಶ್ಲೇಷಣೆಯಲ್ಲೂ ಹಂಚಿಕೊಳ್ಳುತ್ತಿರುವಾಗ ನನ್ನನ್ನೇ ನಾನು ಮತ್ತೊಮ್ಮೆ ಕಂಡುಕೊಳ್ಳುತ್ತಿದ್ದೇನೆ ಎನ್ನುವ ಭಾವವಿದೆ.
ರೂಪಾ ಗುರುರಾಜ್ ಅವರು ಸಂವಹನ-ಲೇಖನ ಮತ್ತಿತರ ಸೃಜನಶೀಲ ಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ರೇಡಿಯೊ ಮತ್ತು ಸಂವಹನ, ಸ್ಕ್ರಿಪ್ಟ್ ಮತ್ತು ಸೃಜನಾತ್ಮಕ ಬರಹ, ಕಂಠದಾನ, ಕಾರ್ಯಕ್ರಮ ನಿರೂಪಣೆ ಮೊದಲಾದ ಹತ್ತು ಹಲವು ರಂಗಗಳಲ್ಲಿ ದಶಕಕ್ಕೂ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಡಿಡಿ ಚಂದನ ಮತ್ತು ಎಫ್‌ಎಂ ರೇನ್‌ಬೋ, ನಮ್ ರೇಡಿಯೋ ಜತೆ ಹಲವಾರು ವರ್ಷ ಕೆಲಸ ಮಾಡಿದ್ದಾರೆ. ಸಾಕಷ್ಟು ರೇಡಿಯೋ ಹಾಗೂ ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ಅವರ ಕಂಠಸಿರಿಯ ಸ್ಪರ್ಶವಿದೆ. ನಾನಾ ರೀತಿಯ 500ಕ್ಕೂ ಹೆಚ್ಚಿನ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. ಕೆಲವು ಕಿರುಚಿತ್ರಗಳಲ್ಲಿಯೂ ನಟಿಸಿದ್ದಾರೆ. ಉಡುಪು ಮತ್ತು ...
READ MORE