ಆಂಗ್ಇಲ ಸಾಹಿತಿ ಇಲ್ಲವೇ ಸಾಹಿತ್ಯ ಕೃತಿಗಳಿಗೆ ಸ್ಪಂದಿಸಿ, ಲೇಖಕಿ ನಾಗರೇಖಾ ಗಾಂವಕರ ಅವರು ಕರಾವಳಿ ಪತ್ರಿಕೆಯಲ್ಲಿ ಬರೆದ ಅಂಕಣ ಬರೆಹಗಳು ‘ಆಂಗ್ಲ ಸಾಹಿತ್ಯ ಲೋಕ’ದಲ್ಲಿ ಒಳಗೊಂಡಿವೆ. ಪತ್ರಕರ್ತ ಹಾಗೂ ಸಾಹಿತಿ ಗಂಗಾಧರ ಹಿರೇಗುತ್ತಿ ಕೃತಿಗೆ ಬರೆದ ಮುನ್ನುಡಿಯಲ್ಲಿ ‘ಲೇಖಕಿಗೆ ಪಾಶ್ಚಿಮಾತ್ಯ ಸಾಹಿತ್ಯದ ಪ್ರಭಾವ ಅಧಿಕವಿದೆ. ಪಾಶ್ಚಾತ್ಯ ಸಾಹಿತ್ಯದಲ್ಲಿ ಮನೋವಿಜ್ಞಾನದ ಗಾಢತೆ, ಅವರ ಬದುಕಿನ ಔನ್ನತ್ಯ, ಮೌನ, ಬದುಕಿನ ವಿಸ್ಮಯಗಳು ಲೇಖಕಿಯ ಮೇಲೆ ಪ್ರಭಾವ ಬೀರಿದ್ದನ್ನು ಪ್ರತಿ ಲೇಖನವೂ ಸ್ಪಷ್ಟಪಡಿಸುತ್ತದೆ. ಸಾಹಿತ್ಯ-ಸಾಹಿತಿ ಮಧ್ಯೆ ಯಾವ ಗೆರೆಯೂ ಹಾಕಿಕೊಳ್ಳದೇ ಸಾಹಿತ್ಯ ಲೋಕದ ಅಲೆಮಾರಿಯ ರೂಪಕದಂತೆ ಅವರು ಸಾಹಿತ್ಯ ಕೃಷಿ ಇದೆ ’ಎಂದು ಪ್ರಶಂಸಿಸಿದ್ದಾರೆ.
ಸೂಕ್ಷ್ಮ ಸಂವೇದನೆಯ ಕತೆಗಾರ್ತಿ ನಾಗರೇಖಾ ಗಾಂವಕರ ಅವರು ಮೂಲತಃ ಉತ್ತರ ಕನ್ನಡದವರು. ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿಧರೆಯಾದ ಅವರು ಪ್ರಸ್ತುತ ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. `ಏಣಿ, ಪದಗಳೊಂದಿಗೆ ನಾನು, ಬರ್ಫದ ಬೆಂಕಿ’ (ಕವನ ಸಂಕಲನಗಳು), ಪಾಶ್ಚಿಮಾತ್ಯ ಸಾಹಿತ್ಯ ಲೋಕ, ಆಂಗ್ಲ ಸಾಹಿತ್ಯ ಲೋಕ (ಅಂಕಣ ಬರಹ ಕೃತಿ), ಸಮಾನತೆಯ ಸಂಧಿಕಾಲದಲ್ಲಿ (ಮಹಿಳಾ ಸಮಾನತೆಯ ಕುರಿತ ಅಂಕಣ ಬರಹ ಕೃತಿ), ಕವಾಟ (ಪುಸ್ತಕ ಪರಿಚಯ ಕೃತಿ) ಅವರ ಪ್ರಮುಖ ಕೃತಿಗಳು. ಅವರ ‘ಏಣಿ’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ...
READ MORE