ರಾಜಧರ್ಮ, ರಾಜನೀತಿ ಭಾಗ-2

Author : ಕೆ.ಎಸ್‍. ನಾರಾಯಣಾಚಾರ್ಯ

Pages 350

₹ 175.00

Buy Now


Year of Publication: 2016
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪೀಕರ್ ಬೀದಿ, ಹುಬ್ಬಳ್ಳಿ- 580020
Phone: 0836-2367676

Synopsys

ಧಾರ್ಮಿಕ ಚಿಂತಕ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರು ಬರೆದ ಕೃತಿ-ರಾಜಧರ್ಮ, ರಾಜನೀತಿ-ಭಾಗ-2 . ಪ್ರಸಕ್ತ ರಾಜಕೀಯ ಸೇರಿದಂತೆ ಎಲ್ಲ ವಲಯಗಳಲ್ಲಿಯ ಹದಗೆಟ್ಟ ಹಿನ್ನೆಲೆಯಲ್ಲಿ ವಿಶ್ಲೇಷಿಸಿರುವ ಲೇಖಕರು ಉತ್ತಮ ಆಡಳಿತದ ಚಿತ್ರಣದ ಸ್ವರೂಪವನ್ನೂ ನೀಡಿದ್ದಾರೆ. ಸನಾತನ ಧರ್ಮ ಗ್ರಂಥಗಳು, ಚಾಣಕ್ಯನ ರಾಜನೀತಿ ಇತ್ಯಾದಿ ರಾಜಧರ್ಮ, ರಾಜನೀತಿ ಕುರಿತಂತೆ ಏನು ಹೇಳುತ್ತವೆ ಎಂಬ ಬಗ್ಗೆಯೂ ಅಗತ್ಯಕ್ಕೆ ತಕ್ಕಂತೆ ಪ್ರಸ್ತಾಪ ಮಾಡಿದ್ದು, ತುಂಬಾ ಪರಿಣಾಮಕಾರಿ ಬರಹಗಳಿವು. ವಿವಿಧ ಪತ್ರಿಕೆಯಲ್ಲಿ ಅಂಕಣ ಬರಹಗಳಾಗಿ ಪ್ರಕಟಗೊಂಡಿದ್ದು, ಅವುಗಳ ಸಂಗ್ರ ಕೃತಿ ಇದಾಗಿದೆ. 

 

ಹಿನ್ನೆಲೆಯಲ್ಲಿ ಆಡಳಿತ ಉತ್ತಮಾಂಶಗಳನ್ನು ಒಂದೆಡೆ ಕಟ್ಟಿಕೊಟ್ಟಿರುವ ಕೃತಿ ಇದು.

About the Author

ಕೆ.ಎಸ್‍. ನಾರಾಯಣಾಚಾರ್ಯ
(31 October 1933 - 26 November 2021)

ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ  (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್‌ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್‌ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ...

READ MORE

Related Books