‘ಇಳೆ ಕಾದಿದೆ ಮನ ಅರಳಿದೆ’ ಜೀಯು ಭಟ್ ಅವರ ಅಂಕಣ ಬರಹವಾಗಿದೆ. ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿಯಾಗಬೇಕೆಂದು ಚಿಂತಿಸುವ ಕೆಲವೇ ಬುದ್ಧಿ ಜೀವಿಗಳಲ್ಲಿ ಇವರು ಒಬ್ಬರಾಗಿದ್ದಾರೆ. ಇವರದು ಮೊನಚಾದ ಶೈಲಿ, ಅಷ್ಟೇ ಆಕರ್ಷಕ. ಇವರ ಬರೆಹಗಳು ಒಮ್ಮೆ ಓದಿ ಎಸೆಯುವಂತಹುದಲ್ಲ. ಪುನಃ ಪುನಃ ಓದಿ ಮೆಲಕು ಹಾಕುವಂತಹುದು.
ಜೀಯು ಭಟ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. ಪತ್ರಿಕೋದ್ಯಮ ಮತ್ತು ಕೃಷಿಯನ್ನು ವೃತ್ತಿಯಾಗಿಸಿಕೊಂಡಿದ್ದಾರೆ. ಉದಯವಾಣಿ ಹಿರಿಯ ವರದಿಗಾರನಾಗಿ 50 ವರ್ಷಗಳಿಂದ ಕೆಲಸನಿರ್ವಹಿಸಿದ್ದಾರೆ . ಸಂಯುಕ್ತ ಕರ್ನಾಟಕ ಪತ್ರಿಕೆಯ ಹೊನ್ನಾವರದ ವರದಿಗಾರನಾಗಿ , ಗ್ರಾಮ ವಿಕಾಸ ವಾರಪತ್ರಿಕೆಯ ಸಂಪಾದಕನಾಗಿ, ಸಮನ್ವಯ ವಾರಪತ್ರಿಕೆಯ ಸ್ಥಾನಿಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದಾರೆ. “ಜೋಕುಮಾರ ಸ್ವಾಮಿ”, “ಅಂಧಯುಗ”, “ಬೇಲಿ ಮತ್ತು ಹೊಲ”, “ಆಷಾಢದ ಒಂದು ದಿನ”, ನಾಟಕಗಳನ್ನು ನಿರ್ದೇಶಿಸಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಾಗೂ ಹರಿಶ್ಚಂದ್ರ ಭಟ್ ನಿರ್ದೇಶಿಸಿದ “ಶೋಧ”,, ಕಾಶಿನಾಥರ “ಅನುಭವ”, ಅಂಬರೀಶ ಜೊತೆ “ಗಿರಿಬಾಲೆ”, ಚಲನಚಿತ್ರದಲ್ಲಿ, “ಅಪ್ಸರಧಾರಾ” ,ವಿಶಾಲರಾಜ್ ನಿರ್ದೇಶನದ ...
READ MORE