ಉದಯವಾಣಿ ಪತ್ರಿಕೆಯಲ್ಲಿ ಪ್ರತಿ ಭಾನುವಾರದ ಸಾಪ್ತಾಹಿಕದಲ್ಲಿ (ಆಗಸ್ಟ್ 2003ರವರೆಗೆ) ಲೇಖಕ ಓ.ಎಲ್. ನಾಗಭೂಷಣ ಸ್ವಾಮಿ ಅವರು ಬರೆದ ಅಂಕಣಗಳಲ್ಲಿಯ ಪ್ರಬಂಧಗಳನ್ನು ಇಲ್ಲಿ ಸಂಕಲಿಸಿದ್ದೇ ಈ ಕೃತಿ-ಏಕಾಂತ ಲೋಕಾಂತ. ಕವಿ ಎಚ್.ಎಸ್. ರಾಘವೇಂದ್ರ ರಾವ್ ಕೃತಿಗೆ ಬರೆದ ಮುನ್ನುಡಿಯಲ್ಲಿ ‘ಇಲ್ಲಿಯ ಅಂಕಣ ಬರೆಹಗಳು ಅಂಕಣತೆಯನ್ನೂ ಮೀರುತ್ತವೆ’ ಎಂದು ಪ್ರಶಂಸಿಸಿದ್ದಾರೆ.
ಕೃತಿಯಲ್ಲಿ ಬದಲಾವಣೆಯ ಅರಿವು, ಸೌಂದರ್ಯದ ಉದ್ಯಮ, ಸೌಂದರ್ಯದ ರಾಜಕೀಯ, ಧ್ಯಾನದಲ್ಲಿ ಕಂಡ ಜೇಡರ ಹುಳು: ಮೂರು ಕಥೆಗಳು, ಅವಳು ಅಂದು ಹಾಗೇಯೇ ಕಂಡಿದ್ದಳೇ?, ಸುಡುವ ಕಾಲ, ಯಾವ ಊರಾದರೇನು?, ಹೆಂಡದಂಗಡಿ ಮತ್ತು ಮಕ್ಕಳಾಟ, ಎಷ್ಟೊಂದು ಕಿಡಕಿ ಹೀಗೆ ಸುಮಾರು 34 ಅಂಕಣ ಬರೆಹಗಳು ಒಳಗೊಂಡಿವೆ.
©2024 Book Brahma Private Limited.