ಶರಣ ಸಂಸ್ಕೃತಿಯ ವೈಚಾರಿಕ ಚಿಂತನಾ ಬರಹಗಳ ಸಂಗ್ರಹ ಕೃತಿ-ಬಸವ ನಿಷ್ಠೆ. ಲೇಖಕ ನಿಷ್ಠಿ ರುದ್ರಪ್ಪ ಅವರು ರಚಿಸಿದ್ದು,ಬಸವ ಚಿಂತನೆಗಳನ್ನು ಕೇಂದ್ರೀಕರಿಸಿ ಬಹುಮುಖೀಯ ಆಯಾಮಗಳಲ್ಲಿ ಸ್ಪಂದಿಸಿ, ಅಭಿವ್ಯಕ್ತಿಪಡಿಸಿದ ಒಟ್ಟು 35 ಬರಹಗಳನ್ನು ಸಂಕಲಿಸಲಾಗಿದೆ. ಈ ಚಿಂತನೆಗಳು ಬಸವಣ್ಣ ಅವರ ವ್ಯಕ್ತಿತ್ವದ ದರ್ಶನವೂ ಆಗಲಿದೆ. ಬರಹಗಳ ಚಿಂತನೆಯಲ್ಲಿ ಜೀವನ ದರ್ಶನವಿದೆ. ಅಲೌಕಿಕ ನೋಟವೂ ಇದೆ. ಸತ್ಯದ ಕಾಣ್ಕೆಯೂ ಇದೆ. ಇಲ್ಲಿಯ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಅಂಕಣ ಬರಹಗಳಾಗಿ ಪ್ರಕಟವಾಗಿವೆ. ಶರಣರ ಚಿಂತನೆಗಳು ಸಮಾಜೋಧಾರ್ಮಿಕ ಚಿಂತನೆಗಳನ್ನು ಹೊಂದಿದ್ದು, ಅವುಗಳ ಸಾರ್ವಕಾಲೀಕ ಸತ್ಯವನ್ನು ಮುಂದಿನ ಪೀಳಿಗೆಗೆ ಮುಂದುವರೆಸುವ ಅವಶ್ಯಕತೆಯನ್ನು ಈ ಕೃತಿಯು ಪ್ರತಿಪಾದಿಸುತ್ತದೆ. 21ನೇ ಶತಮಾನದಲ್ಲಿಯೂ ಮೌಢ್ಯತೆಯ ಕೂಪದಲ್ಲಿ ಬಿದ್ದಿರುವವರನ್ನು ಶರಣರ ವೈಚಾರಿಕ ಚಿಂತನೆಗಳು ಚಿಂತನೆಗೆ ಹಚ್ಚುವ ಕೆಲಸ ಮಾಡುತ್ತವೆ. ಶರಣರ ವಚನಗಳ ಅಂತಹ ಅಂತಃಸತ್ವವನ್ನು ಈ ಕೃತಿಯು ಒಳಗೊಂಡಿದೆ.
©2024 Book Brahma Private Limited.