ಜಿ.ಯು. ಭಟ್ ಅವರ 'ಬಹುಮುಖಿ' ಒಂದು ವಿಭಿನ್ನ ಬಗೆಯ ಅಂಕಣ ಬರಹಗಳ ಸಂಕಲನ, ಈಗ ಬಹುತೇಕ ಪತ್ರಿಕೆಗಳು ಅನೇಕ ವಿದ್ವಾಂಸರ ಅಂಕಣ ಬರಹಗಳನ್ನು ಸಾಂದರ್ಭಿಕ ಘಟನೆ, ಸಂದರ್ಭ, ಸನ್ನಿವೇಶಗಳನ್ನು ಕುರಿತು ತಮ್ಮದೇ ಆದ ಭಾಷೆ, ಶೈಲಿಗಳ ಮೂಲಕ ಸಿದ್ಧಗೊಳಿಸಿಕೊಟ್ಟಿರುವುದನ್ನು ಪ್ರಕಟಿಸುತ್ತಾ ಬರುತ್ತಿವೆ. ಹಾಗಾಗಿ ಅಂಕಣ ಸಾಹಿತ್ಯ ಒಂದು ಪ್ರಕಾರವಾಗಿ ತನ್ನದೇ ಆದ ನೆಲೆಯನ್ನು ಸಾಹಿತ್ಯಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ. ಪ್ರತಿಯೊಂದು ಬರಹಗಳು ಅಂದಂದಿನ ಸ್ಥಿತಿಗತಿಗಳಿಗೆ ಸ್ಪಂದಿಸುತ್ತಾ ಬಂದಿವೆ. ಕಲೆ, ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ವೈಜ್ಞಾನಿಕ, ರಾಜಕೀಯ, ಯಕ್ಷಗಾನ, ಜಾನಪದ, ಶೈಕ್ಷಣಿಕ, ಜಾಗತಿಕ, ರಂಗಭೂಮಿ, ವಿಶಿಷ್ಟ ಸಾಧಕರ ಮುಂತಾದ ಕ್ಷೇತ್ರಗಳಲ್ಲಿನ ವೈಶಿಷ್ಟ್ಯ, ವೈವಿಧ್ಯಗಳನ್ನು ಪುಟ್ಟ ಪುಟ್ಟ ಲೇಖನಗಳಲ್ಲಿ ಹೆಚ್ಚಿನ ವಿಷಯ ಸಂಗ್ರಹಣೆ ಮೂಲಕ ಹಿಡಿದಿಟ್ಟಿರುವುದು ಎದ್ದುಕಾಣುತ್ತದೆ. ಇಂತಹ ವಿವಿಧ ಬಗೆಯ ಲೇಖನಗಳನ್ನೊಳಗೊಂಡ ಕೃತಿ 'ಬಹುಮುಖಿ' ಸಂಕಲನ.
©2024 Book Brahma Private Limited.