ಸಕ್ರಿಯ ಸಾಮಾಜಿಕ ಕಾರ್ಯಕರ್ತ, ರಾಜಕೀಯ ಚಿಂತಕ, ಲೇಖಕ ನೂರ್ ಶ್ರೀಧರ್ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯವರು. ಕಾಲೇಜು ದಿನಗಳಲ್ಲಿ ಎಡಪಂಥೀಯ ಚಿಂತನೆಗಳಿಂದ ಸ್ಪೂರ್ತಿ ಪಡೆದು, ಸಾಮಾಜಿಕ ಚಳವಳಿಯಲ್ಲಿ ತೊಡಗಿಕೊಂಡವರು. ನ್ಯಾಯಪಥ, ಸಂವಾದ ಒಳಗೊಂಡಂತೆ ಹಲವಾರು ಪತ್ರಿಕೆಗಳಲ್ಲಿ ಸಮಕಾಲೀನ ವಿಷಯಗಳ ಕುರಿತು ವಿಶ್ಲೇಷಣಾ ಲೇಖನಗಳನ್ನು ಬರೆಯುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಭಾರತದ ಕ್ರಾಂತಿ ಮತ್ತು ಮಾವೋವಾದಿ ಚಳವಳಿ ಹಾಗೂ ನನ್ನನುಭವದ ಸೂಫಿ.