ಶ್ರೀಧರ ಪತ್ತಾರ ಅವರು ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಖೇಡಗಿ ಗ್ರಾಮದವರು. ಬೆಳೆದದ್ದು ಹಿರೇಮಸಳಿಯಲ್ಲಿ. 1988 ರಲ್ಲಿ ಜನನ. 'ಜೀವಪ್ರೀತಿ' ಇವರ ಮೊದಲ ಕವನ ಸಂಕಲನ. ಈ ಕೃತಿ 2016ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪುರಸ್ಕೃತ ತಗೊಂಡಿದೆ. ಇವರ ಕವಿತೆಗಳು ಮತ್ತು ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಕಾಡಿನ ಕುರಿತಾದ ಕಥನಗಳು ಪ್ರತಿಷ್ಠಿತ 'ಫಾರೆಸ್ಟ್ ರಿಪೋರ್ಟರ್' ಮ್ಯಾಗಜಿನ್‌ಲ್ಲಿ ಪ್ರಕಟಗೊಂಡಿವೆ. ಸದ್ಯ ವಿಜಯಪುರ ವಲಯದ ಮಮದಾಪುರ ಗಸ್ತಿನಲ್ಲಿ 'ಬೀಟ್ ಫಾರೆಸ್ಟರ್' ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಸೇವಾವಧಿಯಲ್ಲಿ ದಕ್ಕಿದ ಅನುಭವಗಳನ್ನು ಈಗ ಕಥನವಾಗಿಸಿದ್ದಾರೆ. ಕ್ರಿಕೆಟ್ ಮತ್ತು ಚಿತ್ರಕಲೆ ಇವರ ಇತರ ಆಸಕ್ತಿಯ ಕ್ಷೇತ್ರಗಳು. 'ಕಾಟಿಹಳ್ಳದ ತಿರುವು' ಇವರ ಚೊಚ್ಚಲ ಅನುಭವ ಕಥನ.