ಬರಹಗಾರ, ಹೋರಾಟಗಾರ ಕುಮಾರ್ ಸಮತಳ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಸಮತಳ ಗ್ರಾಮದವರು. ವಿದ್ಯಾರ್ಥಿ ದೆಸೆಯಿಂದ ಎಡಪಂಥೀಯ ಚಳವಳಿಯಲ್ಲಿ ಆಸಕ್ತಿ ಇದ್ದ ಇವರು ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಬೆಳ್ಳಿಚುಕ್ಕಿ ಬುಕ್ ಟ್ರಸ್ಟ್ ಪುಸ್ತಕ ಮಾರಾಟ ಮಳಿೆಗೆ ಹಾಗೂ ಗ್ರಂಥಾಲಯವನ್ನು ಕೆಲಕಾಲ ನಡೆಸಿದ್ದರು.
ಪ್ರಸ್ತುತ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯಲ್ಲಿ ಚಟುವಟಿಕೆಯಿಂದಿದ್ದಾರೆ. ಸುಮಾರು ೩ ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸಿರುವ ಇವರು ಜೈಲಿನ ಅನುಭವದ ಬಗ್ಗೆ ಜೈಲೆಂಬ ಲೋಕದಲ್ಲಿ ಕೃತಿ ರಚಿಸಿದ್ದಾರೆ.