ಕನ್ನಡ ಸಾಹಿತ್ಯ ವಲಯದಲ್ಲಿ ಪ.ಗೋ. ಎಂದೇ ಖ್ಯಾತಿ ಪಡೆದಿದ್ದ ಪದ್ಯಾಣ ಗೋಪಾಲಕೃಷ್ಣ ಅವರು ದಕ್ಷಿಣ ಕನ್ನಡ ಹಾಗೂ ಕೇರಳದ ಕಾಸರಗೋಡು ಗಡಿಯ ಊರು ಅಡ್ಯನಡ್ಕದಲ್ಲಿ 19298 ರಲ್ಲಿ ಹುಟ್ಟಿದರು. ಬೆಂಗಳೂರಿಗೆ ಬಂದು ‘ವಿಶ್ವ ಕರ್ನಾಟಕ ದಿನಪತ್ರಿಕೆ ಸೇರಿದರು. ನಂತರ ತಾಯಿನಾಡು, ಕಾಂಗ್ರೆಸ್ ಸಂದೇಶ ಮತ್ತು ಸಂಯುಕ್ತ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದರು. ಮಡಿಕೇರಿಯ "ಶಕ್ತಿ " ಪತ್ರಿಕೆಯ ಬೆಂಗಳೂರಿನ ವರದಿಗಾರರಾಗಿದ್ದರು 1959 ರಲ್ಲಿ ಅವರು ಮಂಗಳೂರಿಗೆ ತೆರಳಿ ನವಭಾರತ, ಕನ್ನಡವಾಣಿ ಪತ್ರಿಕೆಯಲ್ಲಿ ಉಪ ಸಂಪಾದಕರಾದರು. ನಂತರ ಇಂಡಿಯನ್ ಎಕ್ಸಪ್ರೆಸ್, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಟೈಮ್ಸ್ ಆಫ್ ಡೆಕ್ಕನ್ ಪತ್ರಿಕೆಗಳ ಮಂಗಳೂರು ವರದಿಗಾರರಾಗಿದ್ದರು. ತದನಂತರ ಅವರು (1963-64) ರಲ್ಲಿ "ವಾರ್ತಾಲೋಕ" ದಿನಪತ್ರಿಕೆ ಆರಂಭಿಸಿದರು. ಸುಮಾರು 40 ವರ್ಷ ಪತ್ರಿಕೋದ್ಯಮದಲ್ಲಿದ್ದು, 1994ರಲ್ಲಿ ವಿದಾಯ ಹೇಳಿದರೂ ಅಂಕಣಗಳನ್ನು ಬರೆಯುತ್ತಿದ್ದರು. ಹೊಸದಿಗಂತ ಪತ್ರಿಕೆಗೆ ಅವರು ವಿಶ್ವ ಸೃಷ್ಟಿಗಳ ಲೋಕದಲ್ಲಿ ಹಾಗೂ ನೋ ಚೇಂಜ್ ಅಂಕಣಗಳು ಅಂದು ಓದುಗರ ಮೆಚ್ಚುಗೆ ಗಳಿಸಿದ್ದವು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಗದ ಸ್ಥಾಪನೆಯಲ್ಲೂ (1976) ಇವರ ಪಾತ್ರ ಮಹತ್ವದ್ದು. ಅಂದಿನ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕ ಸದಸ್ಯ ಹಾಗೂ ಸಂಘದ ಪ್ರಥಮ ಕಾರ್ಯದರ್ಶಿಯಾಗಿದ್ದರು.
ಕೃತಿಗಳು ಹಲವಾರು ಪತ್ರಿಕೆಗಳಲ್ಲಿ ಅಗಾಗ ಅಂಕಣಕಾರರಾಗಿ ಬರೆದ ಸಾಹಿತ್ಯ 4 ಸಾವಿರ ಪುಟಗಳಿಗೂ ಮೀರಿದೆ. ‘ಬೆಳ್ಳಿಯ ಸೆರಗು’ (ಸಾಮಾಜಿಕ ಕಾದಂಬರಿ), ಗನ್ ಬೋ ಸ್ಟ್ರೀಟ್ , ಓ. ಸಿ. ೬೭ (ಪತ್ತೇದಾರಿ ಕಾದಂಬರಿಗಳು) ಪ.ಗೋ. ಪತ್ರಗಳು ( ತಾಯಿನಾಡು ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಗಳಿಗೆ ಬರೆದ ಅಂಕಣಗಳ ಬರಹಗಳು. ಈ ಪತ್ರಗಳಲ್ಲಿ ಕನ್ನಡ ಪತ್ರಿಕೋದ್ಯಮದ ಅಂದಿನ ದಿನಗಳ ಒಂದು ಇಣುಕು ನೋಟವಿದೆ). ಹೆಚ್.ಆರ್.ನಾಗೇಶರಾವ್ ಅವರ ಸಂಗ್ರಹಿಸಿದ್ದಾರೆ.