ಪ್ರಸ್ತುತ ಕಾಲಘಟ್ಟದಲ್ಲಿ ಪರಿಸರ ಪ್ರಜ್ಞೆಯಂತಿರುವ ಮತ್ತು ಅಕ್ಷರಜ್ಞಾನಕ್ಕಿಂತಲೂ ವಿವೇಕ, ವಿಚಾರವಂತಿಕೆಗಳು ಪ್ರಮುಖವಾದವು ಎಂಬುದಕ್ಕೆ ಪ್ರಮುಖ ಉದಾಹರಣೆಯಾಗಿ ನಮ್ಮ ಕಣ್ಣ ಮುಂದೆ ಇರುವ ಜೀವಂತ ದಂತಕತೆ “ಸಾಲುಮರದ ತಿಮ್ಮಕ್ಕ”. ಸಾಲುಮರದ ತಿಮ್ಮಕ್ಕರ ಬದುಕು ಈ ಪೀಳಿಗೆಗೆ ಮಾದರಿಯಾದುದು. ಮಕ್ಕಳಿಲ್ಲದ ದಂಪತಿ ಸಾಲುಮರಗಳನ್ನೆ ತಮ್ಮ ಮಕ್ಕಳಂತೆ ಪ್ರೀತಿಸಿ, ಪೋಷಿಸಿ ಈ ನೆಲಕ್ಕೆ ನೆರಳಾದದ್ದು. ಇದು ಯಾವುದೋ ಜನಪದ ಕತೆಯಂತೆ ಕಂಡುಬಂದರೂ , ನಮ್ಮೆದುರಿಗಿನ ವಾಸ್ತವ ಅದು. ಆ ವಾಸ್ತವವನ್ನು ಲೇಖಕ ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅವರು ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡೇ ಸರಳ ನಿರೂಪಣೆಯೊಂದನ್ನು ಕೃತಿಯಲ್ಲಿ ನಿರೂಪಿಸಿದ್ದಾರೆ.
ಚಿತ್ರದುರ್ಗ ತಾಲೂಕು ಭರಮಸಾಗರ ಹೋಬಳಿ ನೆಲ್ಲಿಕಟ್ಟೆ ಗ್ರಾಮದಲ್ಲಿ ಸಿದ್ದಪ್ಪ ಮಾರಕ್ಕ ದಂಪತಿಯ ಮಗನಾಗಿ 1972ರ ಮಾರ್ಚ್ 4ರಂದು ನೆಲ್ಲಿಕಟ್ಟೆ ಎಸ್ ಸಿದ್ದೇಶ್ ಜನಿಸಿದರು. ಬಿ.ಎ.ಪದವಿಯನ್ನು 7ನೇ ರ್‍ಯಾಂಕ್ ಬಿ.ಇಡಿ.ಪದವಿ ಚಿನ್ನದ ಪದಕ. ಎಂ.ಎ.ಪದವಿ 3ನೇ ರ್‍ಯಾಂಕ್ ಪಡೆದಿದ್ದು, ಅಭಿನವ ಕಾಳಿದಾಸ ಬಸವಪ್ಪ ಶಾಸ್ತ್ರಿಗಳು-ಒಂದು ಅಧ್ಯಯನ-ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ (2004) ಪಿಎಚ್.ಡಿ.ಪದವಿ ನೀಡಿದೆ. ಬಿಸಿಲು ಮಳೆ. ಛಲಬೇಕು ಶರಣಂಗೆ. ವ್ಯಕ್ತಿತ್ತ ವಿಕಾಸ ಹಾಗೂ ಕನ್ನಡ ಸಾಹಿತ್ಯ. ಅಭಿನವ ಕಾಳಿದಾಸ ಬಸವಪ್ಪ ಶಾಸ್ತ್ರಿ. ಸಿರಿಗನ್ನಡ ಜಾನಪದ. ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ. ಯುವ ಜನತೆ ಮತ್ತು ದುಶ್ಚಟಗಳು. ಸಿರಿಗನ್ನಡ ಪ್ರಾಚೀನ ಕವಿಗಳು. ಕನಕದಾಸರ ...
READ MORE