ಸಾವಳಗಿ ಮಹ್ಮದಸಾಬ ರು ಕನ್ನಡದಲ್ಲಿ ಓದಲು ಮತ್ತು ಬರೆಯಲು ಬಾರದಿದ್ದರು ತನ್ನ ನೆನಪಿನ ಸ್ಮೃತಿಯಲ್ಲಿ ನೂರಾರು ಗೀ ಗೀ ಪದಗಳನ್ನು ಕಾಪಿಟ್ಟುಕೊಂಡಿದ್ದಲ್ಲದೆ ಸ್ವತಃ ತಾವೇ ಗೀಗೀ ಪದಗಳನ್ನು ರಚಿಸಿ ಹಾಡುತ್ತಿದ್ದರು. ನಿಜಕ್ಕೂ ಒಬ್ಬ ಮಹಾ ಎಲೆಮರೆ ಕಾಯಿ. ಒಂದು ಕಾಲದಲ್ಲಿ ಗೀಗೀ ಹಾಡುಗಾರಿಕೆಯಿಂದ ಜಾಗೃತಿ ಮೂಡಿಸುತ್ತ ಬಂದ ಮಹಾನ್ ವ್ಯಕ್ತಿಯಾದ ಸಾಳವಗಿ ಮಹ್ಮದಸಾಬ ಇವರ ಜೀವನ ಸಾಧನೆಯನ್ನು, ಬದುಕಿನ ಏರಿಳಿತವನ್ನು ಲೇಖಕ ಎ.ಕೆ. ರಾಮೇಶ್ವರವರು ಈ ಕೃತಿಯಲ್ಲಿ ವಿವರಿಸಿದ್ದಾರೆ.
ಎ.ಕೆ.ರಾಮೇಶ್ವರ ಮಕ್ಕಳ ಸಾಹಿತಿಗಳಲ್ಲಿ ಪ್ರಮುಖರು. ಮಕ್ಕಳಿಗಾಗಿಯೇ ಹಲವಾರು ಕೃತಿಗಳನ್ನು ರಚಿಸಿದ ಕೀರ್ತಿ ಇವರದು. 1934 ಮೇ 2ರಂದು ವಿಜಯಪುರ ಜಿಲ್ಲೆಯ ದದಾಮಟ್ಟಿ ತಾಲ್ಲೂಕಿನಲ್ಲಿ ಹುಟ್ಟಿದ ಎ.ಕೆ.ರಾಮೇಶ್ವರ ಅವರು ಗುಲಬರ್ಗಾ ಜಿಲ್ಲೆಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಬಂದಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರಾಮೇಶ್ವರ ಅವರು ಮಕ್ಕಳ ಸಾಹಿತಿ ಎಂದೇ ಪ್ರಸಿದ್ಧರಾದವರು. ಮಕ್ಕಳಿಗಾಗಿ ಸುಮಾರು ಹತ್ತು ಗ್ರಂಥಗಳನ್ನು ರಚಿಸಿರುವ ಇವರು ಜಾನಪದ ಕ್ಷೇತ್ರದಲ್ಲೂ ಗಮನಾರ್ಹ ಕೆಲಸ ಮಾಡಿದ್ದಾರೆ. ಸರಳ ಜೀವನ ನಡೆಸುವ ಎ.ಕೆ.ರಾಮೇಶ್ವರ ಅವರು ಹಳ್ಳಿಗಳತ್ತ ಆಕರ್ಷಿತರಾಗಿ ಜನಪದರ ಕಲೆ,ಸಾಹಿತ್ಯ, ಸಂಪ್ರದಾಯಗಳನ್ನೆಲ್ಲ ತೆರೆದ ಕಣ್ಣಿನಿಂದ ಕಂಡವರು. ...
READ MORE