ನವೋದಯ ಮತ್ತು ನವ್ಯದ ಕೊಂಡಿಯಂತೆ ಕೆಲಸ ಮಾಡಿದವರು ಚೆನ್ನವೀರ ಕಣವಿ ಮತ್ತು ಡಾ. ಜಿ.ಎಸ್. ಶಿವರುದ್ರಪ್ಪ. ಆ ಕಾರಣಕ್ಕೇ ಇವರಿಬ್ಬರನ್ನೂ ಆಧುನಿಕ ಸಾಹಿತ್ಯದ ಸಮನ್ವಯ ಕವಿಗಳು ಎಂತಲೂ ಹೇಳುತ್ತಾರೆ.
ಚೆನ್ನವೀರ ಕಣವಿಯವರು ಕನ್ನಡ ಸಾಹಿತ್ಯ ಲೋಕದಲ್ಲಿ ಸ್ನೇಹ, ಪ್ರೀತಿ, ಸೌಜನ್ಯ, ಮಾನವೀಯ ಅಂತಃಕರಣದ ಕವಿಯಾಗಿ ಪ್ರಸಿದ್ದರು. ಅವರ ಜೀವನವೂ ಸಹಜವಾಗಿಯೇ ಸಮೃದ್ಧವಾದದ್ದು, ಈ ಕೃತಿಯಲ್ಲಿ ಕಣವಿಯವರ ಜೀವನ, ಸಾಹಿತ್ಯ ಕೃಷಿಯಬಗ್ಗೆ ಸಂಪೂರ್ಣ ಪರಿಚಯವನ್ನು ಕೊಡಲಾಗಿದೆ.
ಕಣವಿಯವರ ತೊಂಬತ್ತನೆಯ ಜನ್ಮದಿನದ ಅಂಗವಾಗಿ ಪ್ರಕಟವಾದ ಕೃತಿ ಇದು.
ವಿಮರ್ಶಕ ಜಿ.ಎಂ. ಹೆಗಡೆ ಅವರು ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸದ್ಯ ನಿವೃತ್ತರು. ಧಾರವಾಡದಲ್ಲಿ ನೆಲೆಸಿದ್ದಾರೆ. ’ಮಾಸ್ತಿಯವರ ವಿಮರ್ಶೆ: ಒಂದು ಅಧ್ಯಯನ’ ಇವರ ಪಿಎಚ್ ಡಿ ಮಹಾಪ್ರಬಂಧ. ಕೃತಿಗಳು: ಸಾಹಿತ್ಯ ಸಹೃದಯತೆ, ಪುಸ್ತಕಲೋಕ, ಸಾಹಿತ್ಯ ಮತ್ತು ಸಂಸ್ಕೃತಿ ಸ್ಪಂದನ, ಕವಿ ಕಣವಿ, ಕಿಟೆಲ್ ಜೀವನ ಹಾಗು ಕೃತಿ ಸಮೀಕ್ಷೆ. ...
READ MORE