ಶ್ರೀಬಸವ ಅಧ್ಯಯನ ಪೀಠದ ‘ವಚನ ಚಿಂತನ ಮಾಲೆ’ಯಲ್ಲಿ ಪ್ರಕಟವಾದ ಕೃತಿ ‘ಅಕ್ಕಮ್ಮ’. ಲೇಖಕಿ ಎಚ್.ಎಲ್. ಪುಷ್ಪ ಅವರು ಈ ಕೃತಿಯನ್ನು ರಚಿಸಿದ್ದಾರೆ. ಬಸವಣ್ಣನವರ ನಾಯಕತ್ವದಲ್ಲಿ ನಡೆದ ವಚನ ಚಳವಳಿಯ ಸಹಜ ಶಕ್ತಿಯೆಂದರೆ ದಲಿತರು, ಮಹಿಳೆಯರು ಮತ್ತು ಹಿಂದುಳಿದ ವರ್ಗದವರೆಂಬುದು ನನ್ನ ಗ್ರಹಿಕೆ ಎನ್ನುತ್ತಾರೆ ಈ ಮಾಲೆಯ ಪ್ರಧಾನ ಸಂಪಾದಕರಾಗಿದ್ದ ಪ್ರೋ. ಬರಗೂರು ರಾಮಚಂದ್ರಪ್ಪ. ಈ ಸಾಮಾಜಿಕ ಸಮುದಾಯ ಗಳಿಂದಲೇ ವಚನ ಚಳವಳಿಗೆ ಇನ್ನಿಲ್ಲದ ಅನನ್ಯತೆ ಮತ್ತು ಸೋಪಜ್ಞತೆ ಲಭ್ಯವಾಯಿತು. ಆದರೆ, ಬೆರಳೆಣಿಕೆಯ ವಚನಕಾರರನ್ನು ಹೊರತುಪಡಿಸಿ ಉಳಿದವರ ವಚನಾಭಿವ್ಯಕ್ತಿ ಕುರಿತಂತೆ ವಿಶೇಷ ವಿಶ್ಲೇಷಣೆ ನಡೆದಿಲ್ಲ. ಇವರ ಜೀವನ ವೃತ್ತಾಂತದ ಬಗ್ಗೆ ನಡೆದಿರುವ ಸಂಶೋಧನೆಗಳು ಇಲ್ಲವೆನ್ನುವಷ್ಟು ಕಡಿಮೆ. ಯಾರು ವಚನ ಚಳವಳಿಗೆ ಸಾಮಾಜಿಕ ಶಕ್ತಿಯನ್ನು ತುಂಬಿ ಸಾಂಸ್ಕೃತಿಕ ಅನನ್ಯತೆಗೆ ಕಾರಣರಾದರೋ ಅವರ ಅಭಿವ್ಯಕ್ತಿಯನ್ನು ಕುರಿತು ಆದ್ಯತೆಯ ಮೇಲೆ ಚರ್ಚಿಸದೇ ಇರುವುದು ಬಸವಣ್ಣನವರ ಆಶಯ ಮತ್ತು ಆದರ್ಶಕ್ಕೆ ಅನುಗುಣವಾದ ಅಂಶವಲ್ಲ ಎನ್ನುವುದು ನನ್ನ ನಮ್ಮ ತಿಳುವಳಿಕೆ, ಈ ಹಿನ್ನೆಲೆಯಲ್ಲಿ ಬಸವಣ್ಣ, ಅಕ್ಕ, ಅಲ್ಲಮರಾದಿಯಾಗಿ ವಿವಿಧ ಸಾಮಾಜಿಕ ಮೂಲದ ವಚನಕಾರರ ಲಭ್ಯ ಜೀವನಮಾಹಿತಿ ಮತ್ತು ವಚನಗಳ ವಿಸ್ತ್ರತ ವಿಶ್ಲೇಷಣೆ ಮಾಡಿಸುವುದು ವಚನ ಚಳವಳಿಯ ಪ್ರಜಾಸತ್ತಾತ್ಮಕ ಮೌಲ್ಯಕ್ಕೆ ಮರ್ಯಾದೆ ತರುವ ಕೆಲಸವೆಂದು ಭಾವಿಸಿ ಈ ಪುಸ್ತಕ ಮಾಲೆಯನ್ನು ಸಾಕಾರಗೊಳಿಸಲಾಗಿದೆ ಎಂಬುದು ಬರಗೂರು ರಾಮಚಂದ್ರಪ್ಪ ಅವರ ಅನಿಸಿಕೆ. ವಚನ ಚಳವಳಿಯ ಸಾಮಾಜಿಕ ಸ್ವರೂಪವನ್ನೇ ಆದರ್ಶವಾಗಿಟ್ಟುಕೊಂಡು ವಿವಿಧ ಸಾಮಾಜಿಕ ಮೂಲದ ಬರಹಗಾರರಿಗೆ ಪುಸ್ತಕ ರಚನೆಯ ಕೆಲಸವನ್ನು ವಹಿಸಲಾಗಿತ್ತು ಈ ಹಿನ್ನೆಲೆಯಲ್ಲಿ ಡಾ.ಎಚ್.ಎಲ್. ಪುಷ್ಪ ಅವರು ಶಿವಶರಣೆ ಅಕ್ಕಮ್ಮ ಅವರ ಬದುಕಿನ ಕುರಿತು ಈ ಕೃತಿಯಲ್ಲಿ ವಿವರಿಸಿದ್ದಾರೆ.
ಕವಯತ್ರಿ, ಸ್ತ್ರೀವಾದಿ ಎಚ್.ಎಲ್. ಪುಷ್ಪ ಅವರು ದೊಡ್ಡಬಳ್ಳಾಪುರದ ಹೊಸಹಳ್ಳೀ ಉಜ್ಜನಿಯಲ್ಲಿ 1962 ಸೆಪ್ಟಂಬರ್ 18ರಂದು ಜನಿಸಿದರು. ತಾಯಿ ಕಮಲಮ್ಮ, ತಂದೆ ಲಕ್ಷ್ಮಣಗೌಡ. ಕನ್ನಡ ನಾಟಕಗಳಲ್ಲಿ ಮೈಮನಸ್ಸುಗಳ ಸಂಬಂಧ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಕವನ ರಚನೆಯಲ್ಲಿ ಅತೀವ ಆಸಕ್ತಿ ಇರುವ ಇವರು ಅಮೃತಮತಿ ಸ್ವಗತ ಕೃತಿಯ ಮೂಲಕ ಕಾವ್ಯ ಕ್ಷೇತ್ರ ಪ್ರವೇಶಿಸಿದರು. ಪುಷ್ಪ ಅವರ ಪ್ರಮುಖ ಕೃತಿಗಳೆಂದರೆ ಅಮೃತಮತಿಯ ಸ್ವಗತ, ಗಾಜುಗೊಳ, ಮದರಂಗಿ, ವೃತ್ತಾಂತ, ಲೋಹದ ಕಣ್ಣು (ಕವನ ಸಂಕಲನ), ಭೂಮಿಲ್ಲ ಇವಳು, ಗೆಲ್ಲಲಾರ್ಕುಮೆ ಮೃತ್ಯುರಾಜನಂ, ಪರ್ವಾಪರ್ವ (ನಾಟಕ), ಅವಲೋಕನ, ಗಂಧಗಾಳಿ, ವಚನ ಸಾಹಿತ್ಯ ಮತ್ತು ಸ್ತ್ರೀತ್ವದ ಕಲ್ಪನೆ ...
READ MORE