‘ಬಿ.ಶ್ಯಾಮಸುಂದರ್’ ಜೀವನ ಕಥನವನ್ನು ಲೇಖಕ ಪ್ರೊ. ಎಚ್.ಟಿ. ಪೋತೆ ಅವರು ರಚಿಸಿದ್ದಾರೆ. ಬಿ. ಶ್ಯಾಮಸುಂದರ್ ಅಂಬೇಡ್ಕರೊತ್ತರದ ಒಬ್ಬ ವಿಶಿಷ್ಟ ನಾಯಕ. ಪೆರಿಯಾರ್ ಅವರೊಂದಿಗೆ ಸ್ನೇಹ ಹೊಂದಿದ್ದರು ಅಂಬೇಡ್ಕರ್ ಅವರು ನಡೆಸಿದ ಹೋರಾಟದ ಹಾದಿಯನ್ನು ತುಳಿಯುತ್ತಲೇ ದಲಿತ ಜನಸಂಘಟನೆ ಮಾಡಿದರು. ದಲಿತರನ್ನು ನೀವು ಮೂಲಭಾರತೀಯರು ಎಂದು ಹೇಳಿ ಅವರನ್ನು ಬಡದೆಬ್ಬಿಸಿದರು. ಭಾರತ ಸರಕಾರದ ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆಜಿಯವರು, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾಗಿದ್ದ ದಿ.ಎನ್. ಧರ್ಮಸಿಂಗ್ ಅವರು ಬಿ. ಶ್ಯಾಮಸುಂದರ್ ಅವರ ವಿಚಾರಗಳಿಗೆ ಪ್ರಭಾವಿತರಾಗಿದ್ದರು. ಕಲ್ಯಾಣ ಕರ್ನಾಟಕದ ಪ್ರದೇಶದಲ್ಲಿ ದಲಿತರು ಜೈಭೀಮ ಎಂದು ಹೇಳುವ ಮೂಲಕ ಪರಸ್ಪರ ಗೌರವಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಎಂದರೆ, ಅದಕ್ಕೆ ಬಿ. ಶ್ಯಾಮಸುಂದರ್ ಅವರೇ ಕಾರಣಕರ್ತರು ಎನ್ನುತ್ತಾರೆ ಲೇಖಕ ಪ್ರೊ. ಎಚ್.ಟಿ ಪೋತೆ. ಈ ಕೃತಿಯಲ್ಲಿ ಬಿ. ಶ್ಯಾಮಸುಂದರ್: ಜೀವನ ಸಾಧನೆ, ಅವೈದಿಕ ಚಳವಳಿ: ಬಿ.ಶ್ಯಾಮಸುಂದರ್, ದಲಿತ ಚಳವಳಿಯ ಪಿತಾಮಹ ಬಿ. ಶ್ಯಾಮಸುಂದರ್ ಎಂಬ ಹೆಸರಿನಲ್ಲಿ ಶ್ಯಾಮಸುಂದರ್ ಅವರ ಬದುಕಿನ ಹಲವು ಮಜಲುಗಳನ್ನು ದಾಖಲಿಸಿದ್ದಾರೆ. ಜೊತೆಗೆ ಮೂಲ ಭಾರತೀಯರು ಎಂಬ ಮುಖ್ಯ ಅಂಶದ ಅಡಿಯಲ್ಲಿ ನಮ್ಮ ಭೂತ ಮತ್ತು ವರ್ತಮಾನ, ಭೀಮಸೇನೆ ಏಕೆ ಮತ್ತು ಹೇಗೆ, ಮೂಲ ಭಾರತೀಯರಿಗೆ ಪ್ರತ್ಯೇಕ ರಾಜಕೀಯ ವ್ಯವಸ್ಥೆ, ಹದಿನೈದು ಕೋಟಿ ದಮನಿತರ ಮೂರು ತುರ್ತುಗಳು, ಆಂಧ್ರಪ್ರದೇಶ ಸರ್ಕಾರ ಆದೇಶ ಹಾಗೂ ಬಿ. ಶ್ಯಾಮಸುಂದರ್ ಬದುಕಿನ ಮಹತ್ವದ ಘಟನಾವಳಿಗಳು ಎಂಬ ಶೀರ್ಷಿಕೆಯಡಿಯಲ್ಲಿ ಮಹತ್ವದ ಮಾಹಿತಿಗಳನ್ನು ದಾಖಲಿಸಿದ್ದಾರೆ.
©2024 Book Brahma Private Limited.