ಪುಟ್ಟಣ್ಣ ಕಣಗಾಲ್, ರವರು ಕನ್ನಡ ಚಿತ್ರ ರಂಗಕ್ಕೆ ರಂಗು ತಂದುಕೊಟ್ಟವರು. ತಮ್ಮ ಸೃಜನಶೀಲ ಸಿನಿಮಾ ನಿರ್ಮಾಣ ದ ಮೂಲಕ ಛಾಪನ್ನು ಮೂಡಿಸಿದ ಇವರು ತಮ್ಮ ಖಾಸಗಿ ಬದುಕಿನಿಂದ ಬೆಳ್ಳಿ ಜಗತ್ತಿನಲ್ಲಿ ವಿಶ್ವವಿದ್ಯಾಲಯದಂತೆ ಕಂಗೊಳಿಸಿದವರಾಗಿದ್ಧಾರೆ. ಹೆಣ್ಮನಗಳ ತೊಳಲಾಟ, ತಾಕಲಾಟಗಳನ್ನು ತೆರೆ ಮೇಲೆ ಹಿಡಿದಿಡುವುದರಲ್ಲಿ, ನಟ ನಟಿಯರೊಳಗೆ ಪಾತ್ರಗಳನ್ನು ಆವಾಹಿಸುವುದರಲ್ಲಿ ಪುಟ್ಟಣ್ಣ ಕಣಗಾಲ್ ಅವರಿಗೇ ಅವರೇ ಸಾಟಿ ಎನ್ನುವಷ್ಟರ ಮಟ್ಟಿಗೆ ಮುಂದುವರೆದಿದ್ದರು. ಇಂತಹ ಪುಟ್ಟಣ್ಣ ಕಣಗಾಲ್ ಬದುಕಿನ ಏರಿಳಿತ, ಮಿಡಿತಗಳನ್ನು ಅತ್ಯಂತ ಹತ್ತಿರದಿಂದ ಕಂಡು ಅರಿಕೆ ಮಾಡಿಕೊಂಡಿರುವ ಲೇಖಕ “ಡಿ.ಬಿ. ಬಸವೇಗೌಡ”ರು ಈ ಕೃತಿಯಲ್ಲಿ ಅವರ ಬಗ್ಗೆ ಮಾಹಿತಿಯನ್ನು ಒದಗಿಸಿದ್ದಾರೆ.
ಡಿ.ಬಿ. ಬಸವೇಗೌಡರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನವರು. ವೃತ್ತಿಯಲ್ಲಿ ವಕೀಲರು. ಛಾಯಾಗ್ರಹಣ ಇವರ ಆಸಕ್ತಿ. ಕನ್ನಡ ಚಲನಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಜೀವನ ಸಾಧನೆ ಕುರಿತು ‘ಬೆಳ್ಳಿತೆರೆಯ ಭಾವಶಿಲ್ಪಿ’ ಎಂಬ ಕೃತಿ ರಚಿಸಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರನ್ನು ಕುರಿತೇ ಮತ್ತೊಂದು ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟ ಕೃತಿ-ನಾ ಕಂಡ ಪುಟ್ಟಣ್ಣ ಕಣಗಾಲ್ . ...
READ MOREಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ 1985