ರಾಮಾನುಜನ್ ಒಬ್ಬ 'ಜೀನಿಯಸ್’ ಎಂದು ಈ ಪದದ ಅರ್ಥವ್ಯಾಪ್ತಿ ಅಥವಾ ಆಳ ತಿಳಿಯದೆ, ಘೋಷಿಸುವುದು ವಿರಳವಲ್ಲ, ಪ್ರಖರ ಬುದ್ಧಿಮತ್ತೆಗಿಂತಲೂ ಉನ್ನತವಾದ ಇನ್ನೇನೂ ಒಂದು ಗುಣ ಜೀನಿಯಸ್‌ನಲ್ಲಿ ಸಮೃದ್ಧವಾಗಿ ತುಂಬಿರ ಬೇಕು ಎಂದರೆ ಒಪ್ಪುತ್ತೇವೆ. ಆ ಗುಣದ ಹೆಸರು ಅಂತರ್ಬೋಧ ಅಪರಿಹಾರ್ಯ ವೆಂದೇ ಭಾವಿಸಲಾಗಿರುವ ಜಟಿಲ ಸಮಸ್ಯೆಗೆ ಸುಲಭ ಪರಿಹಾರವನ್ನು ದರ್ಶಿಸುವ ಅಂಗೀತ ಅಥವಾ ಸರ್ವಸಮ್ಮತ ಸಿದ್ದಾಂತವೊಂದರಲ್ಲಿ ಅಡಗಿರುವ ಅಸಾಂಗತ್ಯ ವನ್ನು ಗುರುತಿಸಿ ಅರಸುವ, ಮಾಹಿತಿಗಳ ಗೋಜಲಿನಲ್ಲಿ ಶ್ರಮದ ಎಳೆಯನ್ನು ಒಡನೆ ಹೆಕ್ಕುವ ಮೇಲುನೋಟಕ್ಕೆ ತೀರ ಆಸಂಬಂಧಿತವೆಂದು ಭಾಸವಾಗುವ ಎರಡು ಘಟನೆ ಗಳ ಅಥವಾ ಸಿದ್ದಾಂತಗಳ ನಡುವೆ ಅತ್ಯಾಶ್ಚರ್ಯಕರ ರೀತಿಯಲ್ಲಿ ಏಕತೆಯನ್ನು ಸ್ಥಾಪಿಸುವ, ಭವಿಷ್ಯಯುಗಗಳಲ್ಲಿ ಸಂಭವಿಸಬಹುದಾದ ನೂತನಾವಿಷ್ಕಾರಗಳ ಪೂರ್ವ ಸೂಚನೆಯನ್ನು ಇಂದೇ ಮಿಡಿಯುವ, ಇತ್ಯಾದಿ, ಎಕ್ಸ್ ಕಿರಣ ದೃಷ್ಟಿ ಇದು.
ಜಿ.ಟಿ.ನಾರಾಯಣ ರಾವ್ ಅವರು ಪುತ್ತೂರಿನ ಸಮೀಪದ ಮರಿಕೆ ಗ್ರಾಮದಲ್ಲಿ 30-01-1926ರಂದು ಜನಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಎಂ.ಎ. ಪದವಿ ಪಡೆದಿರುವ ಇವರು ಎನ್.ಸಿ.ಸಿ. ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತ ಹಾಗೂ ಕನ್ನಡ ಅಭಿಜಾತ ವಾಙ್ಙಯ ಕುರಿತು ಅಪಾರ ಆಸಕ್ತಿ ಹೊಂದಿದ್ದಾರೆ, ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪನ ಮತ್ತೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಸಿ.ವಿ. ರಾಮನ್‌ರನ್ನು ಬೆಂಗಳೂರಿನಲ್ಲಿಯೂ, ಎಸ್. ಚಂದ್ರಶೇಖರ್‌ರನ್ನು ಚಿಕಾಗೋದಲ್ಲಿಯೂ ಭೇಟಿಮಾಡಿ ವೈಜ್ಞಾನಿಕ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಕನ್ನಡಕ್ಕೆ ವಿಪುಲ ಸ್ವತಂತ್ರ ವೈಜ್ಞಾನಿಕ ಕೃತಿಗಳನ್ನೂ, ಕೆಲವು ...
READ MORE