ಕನ್ನಡದ ಹೋರಾಟಗಾರ ಹಣಮಂತಪ್ಪ ಪಾಟೀಲ ಶೈಲಜಾ ಹುಡಗೆ ಅವರು ಬರೆದ ಕನ್ನಡದ ಹೋರಾಟಗಾರ ಹಣಮಂತಪ್ಪ ಪಾಟೀಲ ಈ ಪುಸ್ತಕ ಅಪರೂಪದ ಕೃತಿ. ಇದರಲ್ಲಿ ಅವರ ಜೀವನ, ಬಾಲ್ಯದ ಶಿಕ್ಷಣ, ಕೌಟುಂಬಿಕ ಬದುಕು, ವೃತ್ತಿ ಜೀವನದೊಂದಿಗೆ ಅವರ ಸಾಧನೆ ಕ್ಷೇತ್ರಗಳಾದ ಶಿಕ್ಷಣ, ಪತ್ರಿಕಾರಂಗ, ಸಾಹಿತ್ಯ, ಸಮಾಜ, ಹಾಗೂ ಸಾಂಸ್ಕೃತಿಕ ಸಾಧನೆಗಳ ಪರಿಚಯವಿದೆ. ಸಮಕಾಲೀನ ಸಹೃದಯಿಗಳ ಸದಭಿಪ್ರಾಯಗಳೂ ಸೇರಿದ್ದು, ಅವರಿಗೆ ಸಂದ ಗೌರವ ಪ್ರಶಸ್ತಿ ಪುರಸ್ಕಾರಗಳನ್ನು ಸೇರಿಸಲಾಗಿದೆ. ಮುಂದೆ ಕವಿಭಾವ ವಿಭಾಗದಲ್ಲಿ ಅವರನ್ನು ಕುರಿತ ಎಂ.ಜಿ. ಗಂಗನಪಳ್ಳಿ,ಯವರ ಸುನಿತ, ಸುರೇಶ ದಾಬಕೆಯವರ ಕವಿತೆಗಳಿವೆ. ವಿಶೇಷವಾಗಿ ಕೊನೆಯಲ್ಲಿ ದೇವು ಪತ್ತಾರ, ಎಂ.ಜಿ ದೇಶಪಾಂಡೆಯವರ ಸಾಂದರ್ಭಿಕ ಲೇಖನಗಳು ಕೃತಿಯ ತೂಕ ಹೆಚ್ಚಿಸಿವೆ
ಮೃದುಸ್ವಭಾವದ ಸರಳದ ಶೈಲಜಾ. ಜಿ. ಹುಡಗೆ ಯವರು ಅಪರೂಪದ ಉದಯೋನ್ಮುಖ ಸಾಹಿತಿಗಳು. ಬಸವ ತತ್ವವನ್ನು ಬದುಕಿನ ಭಾಗವಾಗಿಸಿಕೊಂಡಿರುವ ಇವರು ಮೂಲತಃ ಔರಾದ ತಾಲ್ಲೂಕಿನ ಖಾನಾಪುರದ ಪ್ರತಿಷ್ಠಿತ ಪಾಟೀಲ ಪರಿವಾರದ ಶಾಂತಾಬಾಯಿ ಅಪ್ಪಾರಾವ ಮಗಳಾಗಿ ೨೯ ಡಿಸೆಂಬರ್ ೧೯೭೮ ರಂದು ಜನಿಸಿದ್ದಾರೆ. ಮುಂದೆ ಬೀದರ ಜಿಲ್ಲೆಯ ಕೊಳಾರ ಗ್ರಾಮದ ಸುಸಂಸ್ಕೃತ ಹುಡಗೆ ಪರಿವಾರದ ಗುಂಡಪ್ಪ ಅವರ ಕೈ ಹಿಡಿದು ಪತಿಗೆ ತಕ್ಕ ಸತಿಯಾಗಿ ತುಂಬು ಸಂಸಾರ ನಡೆಸುತ್ತಿದ್ದಾರೆ. ಪತಿಯಾದ ಗುಂಡಪ್ಪ ಹುಡಗೆ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸರ್ವ ಶಿಕ್ಷಣ ಅಭಿಯಾನದ ಸಹಾಯಕ ಯೋಜನಾ ಸಮನ್ವಯಾಧಿಕಾರಿಗಳಾಗಿದ್ದು ಇವರ ಎಲ್ಲ ಸಾಹಿತ್ಯ ...
READ MORE