ಕನ್ನಡ ನಾಡು-ನುಡಿ ರಕ್ಷಣೆಗೆ ಸಂಬಂಧಿಸಿದಂತೆ ಸೇವೆ ಸಲ್ಲಿಸಿದ ಪತ್ರಕರ್ತ, ಸಾಹಿತಿ ಡಾ. ಪಾಟೀಲ ಪುಟ್ಟಪ್ಪನವರ ಬದುಕು-ಬೋಧನೆಯನ್ನೇ ಮುಖ್ಯವಾಗಿಟ್ಟುಕೊಂಡು ಬರೆದ ಈ ಕೃತಿಯಲ್ಲಿ ಅವರ ಜೀವನ ಸಾಧನೆಯ ಪ್ರಮುಖ ಘಟ್ಟಗಳನ್ನು ಗುರುತಿಸಲಾಗಿದೆ. ಕನ್ನಡ ನಾಡು ಕಂಡ ಅಪರೂಪದ ಈ ಬರಹಗಾರ ಪತ್ರಕರ್ತರಾಗಿ, ಸಾಹಿತಿಯಾಗಿ, ಹೋರಾಟಗಾರರಾಗಿ ಕನ್ನಡ ನಾಡು ನುಡಿಯ ಏಳಿಗೆಯನ್ನು ಹೇಗೆ ಬಯಸಿದ್ದರು ಎಂಬುದನ್ನು ಈ ಕೃತಿಯಲ್ಲಿ ಕಟ್ಟಿಕೊಡಲಾಗಿದೆ. ಪಾಪು ಜೀವನ ಚರಿತ್ರೆಯಾಗಿದ್ದರೂ ಆಗಿನ ಕಾಲದ ಅನೇಕ ಸಂದರ್ಭ, ಹೋರಾಟ, ರಾಜಕಾರಣ ಎಲ್ಲವೂ ನಮ್ಮ ಕಣ್ಣ ಮುಂದೆ ಬಂದು ಹೋಗುವಂತೆ ಬರಹ ಮಾಡಿರುವುದು ಇಲ್ಲಿನ ಬರಹದ ವಿಶೇಷತೆ ಎನ್ನಬಹುದು.
ಕನ್ನಡದ ಕಟ್ಟಾಳು ಪಾಟೀಲ ಪುಟ್ಟಪ್ಪನವರ ಕುರಿತು ಇಲ್ಲಿಯವರೆಗೆ ಬಂದಿರುವ ಕೃತಿಗಳಲ್ಲೇ ಇದು ಅತ್ಯಂತ ಮಹತ್ವದ್ದು ಎಂದು ಬೆನ್ನುಡಿ ಬರೆದ ಸುರೇಶ ಬಡಿಗೇರ ಅಭಿಪ್ರಾಯಪಟ್ಟಿದ್ದಾರೆ. ಡಾ. ಶ್ರೀಶೈಲ ನಾಗರಾಳ ಅವರು ಈ ಕೃತಿಗೆ ಮುನ್ನಡಿಯ ತೋರಣ ಕಟ್ಟಿದ್ದಾರೆ. ಕನ್ನಡದ ಮೂಲಕ ವಿಶ್ವದ ಏಳಿಗೆಯನ್ನು ಹೇಗೆ ಕಾಣಬೇಕು ಎಂಬ ಪಾಪು ಅವರ ಕಾಳಜಿಯನ್ನು ಈ ಕೃತಿಯಲ್ಲಿ ಪ್ರಾಮಾಣಿಕ ರೀತಿಯಲ್ಲಿ ನಿರೂಪಿಸಲಾಗಿದೆ.
ಪತ್ರಕರ್ತ-ಲೇಖಕ ಶಿವರಂಜನ್ ಸತ್ಯಂಪೇಟೆ ಅವರು ಹೈದರಾಬಾದ್ ಕರ್ನಾಟಕದ ಸಾಂಸ್ಕೃತಿಕ ವಲಯದಲ್ಲಿ ಚಿರಪರಿಚಿತರು. 1973ರ ಏಪ್ರಿಲ್ 1ರಂದು ಶಹಾಪುರದಲ್ಲಿ ಜನಿಸಿದರು. ತಂದೆ ಹೆಸರಾಂತ ಪತ್ರಕರ್ತ-ವಿಚಾರವಾದಿ ಲಿಂಗಣ್ಣ ಸತ್ಯಂಪೇಟೆ. ತಂದೆಯ ಪ್ರಖರ ವೈಚಾರಿಕತೆಯ ಬೆಳಕಿನಲ್ಲಿ ಬೆಳೆದ ಶಿವರಂಜನ್ ಅವರು ಕಲ್ಬುರ್ಗಿಯ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕ (ಬಿ.ಎ.) ಮತ್ತು ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿದ್ದಾರೆ. ಶಹಾಪುರದ ಚರಬಸವೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಬಾಪುಗೌಡ ದರ್ಶನಾಪುರ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವಾಗಲೇ ಹವ್ಯಾಸಿ ಪತ್ರಕರ್ತ ಆಗಿದ್ದರು. ಸಂಜೆವಾಣಿ ಪತ್ರಿಕೆಯ ಶಹಾಪುರದ ವರದಿಗಾರರಾಗಿದ್ದರು. ನಂತರ ಪೂರ್ಣ ಪ್ರಮಾಣದಲ್ಲಿ ಪತ್ರಿಕಾ ವೃತ್ತಿಗೆ ...
READ MORE