ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ 253ನೇ ಕೃತಿ ತೀರ್ಥಹಳ್ಳಿ ಗೋಪಾಲ ಆಚಾರ್ಯ. ಯಕ್ಷಗಾನ ರಸಿಕರ ಕಣ್ಮಣಿ ಆಗಿರುವ ತೀರ್ಥಹಳ್ಳಿ ಗೋಪಾಲ ಆಚಾರ್ಯ ಕರಾವಳಿಯ ಬಡಗುತಿಟ್ಟಿನ ಹೆಸರಾಂತ ಕಲಾವಿದ ತೀರ್ಥಹಳ್ಳಿ ಗೋಪಾಲಾಚಾರ್ಯರು ಸುಮಾರು 46 ವರ್ಷ ಬಡಗು ತಿಟ್ಟಿನ ರಂಗಸ್ಥಳವನ್ನು ಶ್ರೀಮಂತಗೊಳಿಸಿದವರು. ಕೋಡಂಗಿ ವೇಷದಿಂದ ಹಿಡಿದು ಎರಡನೇ ವೇಷದವರೆಗೆ ಗೋಪಾಲಾಚಾರ್ಯರು ನಡೆದು ಬಂದ ಯಶೋಗಾಥೆ ಮುಂದಿನ ಪೀಳಿಗೆಗೆ ಆದರ್ಶಪ್ರಾಯ ವಾದದ್ದು. ಸೌಮ್ಯ ಸ್ವಭಾವದ ಮಿತಭಾಷಿ, ಸ್ವಾಭಿಮಾನಿ. ಅಭಿಜಾತ ಕಲಾವಿದನಾಗಿ ಸುಮಾರು ನಾಲ್ಕು ದಶಕಕ್ಕೂ ಮಿಕ್ಕಿ ಅಭಿಮನ್ಯು, ಬಭ್ರುವಾಹನ ದಂತಹ ಪುಂಡು ವೇಷಗಳಲ್ಲಿ ಮೆರೆದು ಕ್ರಾಂತಿ ಮೂಡಿಸಿ ಯಕ್ಷರಂಗದ ಅಭಿಮನ್ಯು, ಯಕ್ಷಗಾನದ ಸಿಡಿಲಮರಿ, ಯಕ್ಷಗಾನದ ವೀರಕುವರ, ಯಕ್ಷಗಾನದ ಚಿರಯುವಕ, ರಂಗಸ್ಥಳದ ಪಾದರಸ ಎಂಬಿತ್ಯಾದಿ ಬಿರುದುಗಳನ್ನು ಪಡೆದ ತೀರ್ಥಹಳ್ಳಿ ಗೋಪಾಲ ಆಚಾರ್ಯರ ಕಲಾ ಬದುಕಿನ ಕಥನವೇ ಪ್ರಸ್ತುತ ಕೃತಿ.
ಬನ್ನೂರು ಗ್ರಾಮದ ಕೋರೆಯವರಾದ ಡಾ.ರಮೇಶ ಆಚಾರ್ಯ(ಜನನ 1968) ಅವರು ಉಪನ್ಯಾಸಕರಾಗಿ, ಕಾಪು, ಹಾಸನ ಜಿಲ್ಲೆಯ ಕೊಣನೂರು, ಹಾಗೂ ಶಿಕಾರಿಪುರದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಸದ್ಯ ಬಾರ್ಕೂರಿನ ರುಕ್ಕಿಣಿ ಶೆಡ್ಡಿ ಸ್ಮಾರಕ ನ್ಯಾಶನಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕ ಹಾಗೂ ವಿಭಾಗದ ಮುಖ್ಯಸ್ಥನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 'ಜೈನಕವಿ ನಯಸೇನನ 'ಧರ್ಮಾಮೃತ' ದಲ್ಲಿ ಸಾಮಾಜಿಕ, ಆರ್ಥಿಕ, ಚಾರಿತ್ರಿಕ, ಧಾರ್ಮಿಕ ವಿಚಾರಗಳು' ಎಂಬ ಸಂಪ್ರಬಂಧಕ್ಕಾಗಿ ಅವರಿಗೆ ಪಿಎಚ್.ಡಿ. ಪದವಿ ಪ್ರಾಪ್ತವಾಗಿದೆ. 'ನಯಸೇನನ ಧರ್ಮಾಮೃತ-ಪರಿಕಲ್ಪನಾತ್ಮಕ ನಿರ್ವಚನ.' ಕೃತಿ ಪ್ರಕಟವಾಗಿದೆ. 'ಪಂಪಭಾರತ-ಮೂರು ಉಪನ್ಯಾಸಗಳು', ಕನ್ನಡ ಸಾಹಿತ್ಯಚರಿತ್ರೆ-ಕೆಲವು ಟಿಪ್ಪಣಿಗಳು, 'ವೇದ ...
READ MORE