ಕೆ.ವಿ.ಸುಬ್ಬಣ್ಣ ತಮ್ಮ ಸೃಜನಶೀಲ ಚಟುವಟಿಕೆಗಳಿಂದ ಹೆಗ್ಗೋಡುನಂತಹ ಸಹ್ಯಾದ್ರಿಯ ಪುಟ್ಟ ಹಳ್ಳಿಯನ್ನು ಅಂತಾರಾಷ್ಟ್ರೀಯವಾಗಿ ವಿಶೇಷವಾಗಿ ರಂಗ ಚಟುವಟಿಕೆಗಳಲ್ಲಿ ಪ್ರಸಿದ್ಧಿಗೆ ತಂದರು. ವೃತ್ತಿ-ಪ್ರವೃತ್ತಿ ಎರಡರಲ್ಲೂ ಸಾಮರಸ್ಯ ತರುವ ಕಲೆ ಸುಬ್ಬಣ್ಣ ಅವರಿಗೆ ಸಿದ್ಧಿಸಿತ್ತು. ಯಕ್ಷಗಾನ , ತಾಳಮದ್ದಲೆಯಂತಹ ಕಲೆಗಳೂ ಸೇರಿದಂತೆ ಕನ್ನಡ ರಂಗಭೂಮಿಯ ಗಾಢ ಪ್ರಭಾವದೊಂದಿಗೆ ಪಾಶ್ಚಾತ್ಯರ ನಾಟಕಗಳು ಅವರನ್ನು ಸೆಳೆದವು. ದೇಶೀಯ ಕೃತಿಗಳನ್ನು ದೃಶ್ಯರೂಪಕ್ಕೆ ಇಳಿಸಿದರು. ಹೊಸ ಅಲೆಯ ನಾಟಕಗಳನ್ನು ಪ್ರೇಕ್ಷಕರಿಗೆ ಪರಿಚಯಿಸಿದರು. ಪ್ರದರ್ಶನ ಕಲೆಗೆ ಅಕಾಡೆಮಿಕ್ ಸ್ಪಂದನ ನೀಡಿದರು. ಹೀಗಾಗಿ, ನಾಡಿನ ಸಾಂಸ್ಕೃತಿಕ ಬುದುಕಿಗೆ ಸುಬ್ಬಣ್ಣನವರ ಕೊಡುಗೆ ಅಪಾರ. ಈ ಹಿನ್ನೆಲೆಯಲ್ಲಿ, ಸುಬ್ಬಣ್ಣ ಅವರನ್ನು ವಿವಿಧ ಆಯಾಮಗಳಲ್ಲಿ ಅಧ್ಯಯನಕ್ಕೆ ಒಳಪಡಿಸುವ ಚಿಂತನೆಗಳು ಈ ಕೃತಿಯಲ್ಲಿವೆ.